ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಸಮೀ ಹಳಗೇರಿರವರಿಗೆ ಬೀಳ್ಕೊಡುಗೆ
ಶಿರೂರು: ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುಲ್ ಸಮೀ ಹಳಗೇರಿರವರಿಗೆ ಬೀಳ್ಕೊಡುವ ಸಮಾರಂಭ ಶಿರೂರಿನ ಎ-ಒನ್ ಸೂಪರ್ ಮಾರ್ಕೆಟ್ ನ ಸಭಾಂಗಣದಲ್ಲಿ ಅಕ್ಟೋಬರ್ 31ರಂದು ನಡೆಯಿತು.
ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವು, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌಲಾನಾ ಝಮೀರ್ ಅಹ್ಮದ್ ರಶಾದಿಯವರ ಕುರ್ ಆನ್ ಪಠಣದೊಂದಿಗೆ ಸಭೆಯು ಆರಂಭವಾಯಿತು.
ಜಿಲ್ಲಾ ಸಮಿತಿ ಸದಸ್ಯರಾದ ಪರಿ ಹುಸೇನ್ ಸಾಹೇಬರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾಗಿ ಪ್ರಾಮಾಣಿಕ ಸೇವೆಗೈದು ಅನೇಕ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಿ ಜನಾನುರಾಗಿಯಾಗಿರುವ ಅಬ್ದುಲ್ ಸಮೀಯವರು ಉದ್ಯೋಗದ ನಿಮಿತ್ತ ವಿದೇಶಕ್ಕೆ (ಅಮೇರಿಕಾ) ತೆರಳಬೇಕಾದ ಅಗತ್ಯತೆ ಇರುವುದರಿಂದ ಅವರನ್ನು ಆತ್ಮೀಯವಾಗಿ ಬೀಳ್ಕೊಡುತ್ತಿದ್ದೇವೆ ಎಂದರು.
ಇದೇ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌ.ಝಮೀರ್ ಅಹ್ಮದ್ ರಶಾದಿ, ಜಿಲ್ಲಾ ಕೋಶಾಧಿಕಾರಿ ಸಯ್ಯದ್ ಅಜ್ಮಲ್, ಜಿಲ್ಲಾ ಸಮಿತಿ ಸದಸ್ಯರಾದ ಪೀರು ಸಾಹೇಬ್, ಬೈಂದೂರು ತಾಲೂಕು ಘಟಕದ ಉಪಾಧ್ಯಕ್ಷರಾದ ಮಮ್ದು ಇಬ್ರಾಹಿಮ್, ಕಚ್ಚಿ ಮುಶ್ತಾಕ್, ಎಚ್.ಎಸ್. ಸಿದ್ದೀಕ್, ಇಲ್ಯಾಸ್ ಬೈಂದೂರು, ಮಣಿಗಾರ್ ಜಿಫ್ರಿ, ಮಣೆಗಾರ್ ಮನ್ಸೂರ್ ಮೊದಲಾದವರು ಅಬ್ದುಲ್ ಸಮೀಯವರ ನಿಷ್ಠಾವಂತ ಸೇವೆಯನ್ನು ಕೊಂಡಾಡಿ ವಿದೇಶ ಪ್ರವಾಸಕ್ಕೆ ಶುಭಕೋರಿದರು.
ಹಿರಿಯ ಸದಸ್ಯರಾದ ಕರಾಣಿ ಮುಹಿಯ್ಯುದ್ದೀನ್ ಸಾಹೇಬರು ಶಾಲು ಹೊದಿಸಿ ಸನ್ಮಾನಿಸಿದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ನಮ್ಮ ನಾಡ ಒಕ್ಕೂಟದ ವತಿಯಿಂದ ಸನ್ಮಾನಿಸಿದರು ಹಾಗೂ ನಾಖುದಾ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಮಮ್ದು ಇಬ್ರಾಹಿಮ್ ಸಾಹೇಬ್ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸುತ್ತಾ ಅಬ್ದುಲ್ ಸಮೀಯವರು, ತನ್ನ ಅಧಿಕಾರಾವಧಿಯಲ್ಲಿ ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ನೆರವೇರಿಸಲು ಸಹಕರಿಸಿದ ಕೇಂದ್ರ ಸಮಿತಿ, ಜಿಲ್ಲಾ ಸಮಿತಿ ಹಾಗೂ ವಿಶೇಷವಾಗಿ ತಾಲೂಕು ಘಟಕದ ಸದಸ್ಯರುಗಳ ಸಹಾಯವನ್ನು ಮುಕ್ತ ಕಂಠದಿಂದ ಕೊಂಡಾಡಿದರು.
ಅಧ್ಯಕ್ಷತೆ ವಹಿಸಿದ್ದ ಹುಸೇನ್ ಹೈಕಾಡಿಯವರು ತಮ್ಮ ಭಾಷಣದಲ್ಲಿ ಅಬ್ದುಲ್ ಸಮೀಯವರಂತ ಯುವ ತರುಣರು ಆಸಕ್ತಿವಹಿಸಿ ನಮ್ಮ ನಾಡ ಒಕ್ಕೂಟದ ಜನಪ್ರಿಯತೆಗೆ ಕಾರಣರಾಗಿದ್ದು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜನಪರ ಕಾರ್ಯಗಳಲ್ಲೂ ಶಕ್ತಿಮೀರಿ ಪ್ರಯತ್ನಿಸಿದ ಸೇವೆಯನ್ನು ಶ್ಲಾಘಿಸಿದರು. ಇನ್ನು ಮುಂದೆಯು ಇವರ ಸೇವೆ ಎನ್.ಎನ್.ಒಗೆ ಸಿಗುವಂತಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಎ-ಒನ್ ಸೂಪರ್ ಮಾರ್ಕೆಟ್ ನ ಮಾಲಕರಾದ ಮುಹಮ್ಮದ್ ರಿಯಾಝ್, ತಾಲೂಕು ಘಟಕದ ಸದಸ್ಯರಾದ ಕಾಪ್ಸಿ ಖಲೀಲ್ ಹಾಗೂ ಇತರರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka