ಬೆಂಗಳೂರಿನಲ್ಲಿ ಆಟೋ ಚಾಲಕನ ಹೀನ ಕೃತ್ಯ: ಆಟೋ ಹತ್ತಿದ ಯುವತಿಯ ಮೇಲೆ ಅತ್ಯಾಚಾರ - Mahanayaka

ಬೆಂಗಳೂರಿನಲ್ಲಿ ಆಟೋ ಚಾಲಕನ ಹೀನ ಕೃತ್ಯ: ಆಟೋ ಹತ್ತಿದ ಯುವತಿಯ ಮೇಲೆ ಅತ್ಯಾಚಾರ

18/12/2020

ಬೆಂಗಳೂರು: ಆಟೋ ಹತ್ತಿದ ಯುವತಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿರುವ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ  ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು,  ಸಂತ್ರಸ್ತೆಯ ದೂರು ಆಧಾರಿಸಿ ಆರೋಪಿನ್ನು ಪೊಲೀಸರು ಬಂಧಿಸಿದ್ದಾರೆ.

ದೇವನಹಳ್ಳಿ ನಿವಾಸಿ ಮುಬಾರಕ್(28) ಬಂಧಿತ ಆರೋಪಿಯಾಗಿದ್ದಾನೆ. ಬೆಂಗಳೂರಿನಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದ ಸಂತ್ರಸ್ತೆ, ಮದುವೆಗಳಲ್ಲಿ ಸ್ವಾಗತಕಾರರಾಗಿ ಕೆಲಸ ಮಾಡುತ್ತಿದ್ದರು. ವಿವಾಹ ಸಮಾರಂಭ ಮುಗಿಯುವುದು ತಡವಾದ ಕಾರಣ ಆಕೆ ರಾತ್ರಿಯಿಡಿ ಮಂಟಪದಲ್ಲಿಯೇ ತಂಗಿ ಬೆಳಗ್ಗೆ 6 ಗಂಟೆಗೆ ಥಣಿಸಂದ್ರ ಮುಖ್ಯಸ್ಥೆಯ ಬಳಿ ಬಸ್ ಗಾಗಿ ಕಾಯುತ್ತಿದ್ದು,  ವೇಳೆ ಬಂದಿದ್ದ ಆಟೋವೊಂದಕ್ಕೆ ಏರಿದ್ದರು.

ನಾಗವಾರ ಕಡೆಗೆ ಹೋಗಲು ಸಂತ್ರಸ್ತೆ ಹೇಳಿದ್ದರೆ, ಆರೋಪಿಯು, ತನಗೆ ಬೇರೊಬ್ಬರು ಹಣ ಕೊಡಲು ನಿಂತಿದ್ದಾರೆ. ಆ ಕಡೆ ಹೋಗಿ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಆರೋಪಿಯ ಮಾತು ನಂಬಿದ ಯುವತಿ ಸುಮ್ಮನಾಗಿದ್ದರು. ಆದರೆ ಆತ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿ ಯುವತಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಘಟನೆಯ ಬಳಿಕ ಸಂತ್ರಸ್ತ ಯುವತಿ ಬೇರೆಯವರ ಸಹಾಯ ಪಡೆದು ಪೊಲೀಸ್ ಠಾಣೆಗೆ ಬಂದು ಆಟೋ ನಂಬರ್ ಸಹಿತವಾಗಿ ದೂರು ದಾಖಲಿಸಿದ್ದಾರೆ. ಯುವತಿಯ ದೂರು ಪಡೆದ ಪೊಲೀಸರು ಆರೋಪಿ ಮುಬಾರಕ್ ನಲ್ಲಿ ಪೊಲೀಸರು ಬಂಧಿಸಿದ್ದು, ವಿಚಾರಣೆಯ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಇತ್ತೀಚಿನ ಸುದ್ದಿ