ನಡೆಯಲೂ ಸಾಧ್ಯವಾಗದೇ ಜೈಲಿನಲ್ಲಿ ನರಳುತ್ತಿರುವ ಆ್ಯಸಿಡ್ ನಾಗ: ನಾಗನನ್ನು ಆವರಿಸಿದ ಗಂಭೀರ ಕಾಯಿಲೆ
ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಜೈಲು ಪಾಲಾಗಿರುವ ನಾಗೇಶ್ ಇದೀಗ ಗಂಭೀರ ಕಾಯಿಲೆಯಿಂದ ಬಳಲುತ್ತಿರುವುದಾಗಿ ವರದಿಯಾಗಿದ್ದು, ಜೈಲಿನಲ್ಲಿ ನಾಗೇಶ್ ನರಳಾಡುತ್ತಿದ್ದಾನೆ ಎನ್ನಲಾಗಿದೆ.
ಹೌದು! ಬೆಂಗಳೂರಿನ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಆಕೆಯ ಬದುಕನ್ನೇ ಸರ್ವನಾಶ ಮಾಡಿದ ಪಾಪಿ ನಾಗೇಶ ಗ್ಯಾಂಗ್ರಿನ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾನಂತೆ. ನಡೆಯಲು ಕೂಡ ಸಾಧ್ಯವಾಗದೇ ಆತ ನರಳುತ್ತಿದ್ದಾನೆ ಎಂದು ಹೇಳಲಾಗಿದೆ.
ಗ್ಯಾಂಗ್ರಿನ್ ಗೆ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಕಾಯಿಲೆ ಉಲ್ಬಣವಾಗಿದೆ ಎನ್ನಲಾಗಿದೆ. ಆತನ ಎರಡು ಕಾಲುಗಳನ್ನೂ ಕತ್ತರಿಸುವ ಮಟ್ಟಕ್ಕೆ ಕಾಯಿಲೆ ಉಲ್ಬಣಗೊಂಡಿದೆ ಎಂದು ಹೇಳಲಾಗುತ್ತಿದೆ.
ಯುವತಿ ಪ್ರೀತಿಸಲು ಒಪ್ಪಿಕೊಳ್ಳಲಿಲ್ಲ ಎಂಬ ದ್ವೇಷದಿಂದ ಆಕೆಯ ಮೇಲೆ ಆ್ಯಸಿಡ್ ಹಾಕಿದ್ದ ನಾಗೇಶ್ ಕೇವಲ ಯುವತಿಯ ಜೀವನವನ್ನು ಮಾತ್ರವಲ್ಲದೇ ತನ್ನ ಜೀವನವನ್ನೂ ಹಾಳು ಮಾಡಿಕೊಂಡಿದ್ದಾನೆ. ಇದೀಗ ಜೈಲಿನಲ್ಲಿ ನಾಗೇಶ್ ನ ಅಳುವನ್ನು ಕೇಳುವವರೇ ಇಲ್ಲವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka