ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯಿಂದಲೇ ಮಗಳ ಹತ್ಯೆ!
ಬಳ್ಳಾರಿ: ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದಕ್ಕೆ ಪಾಪಿ ತಂದೆಯೋರ್ವ ಪುತ್ರಿಯನ್ನು ಕಾಲುವೆಗೆ ದೂಡಿ ಹಾಕಿ ಹತ್ಯೆ ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯ ಕುಡುತಿನಿ ಪಟ್ಟಣದ ಸಿದ್ದಮ್ಮನಹಳ್ಳಿ ಬಳಿ ನಡೆದಿದೆ.
ಓಂಕಾರ ಗೌಡ ಎಂಬಾತ ದುಷ್ಕೃತ್ಯ ನಡೆಸಿದ ಪಾಪಿ ತಂದೆಯಾಗಿದ್ದು, ಪೊಲೀಸರ ಮುಂದೆ ಆರೋಪಿ ತನ್ನ ದುಷ್ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಕುಡುತಿನಿಯ ಬುಡ್ಗ ಜಂಗಮ ಕಾಲೋನಿ ನಿವಾಸಿ ಆರೋಪಿ ಓಂಕಾರ ಗೌಡನ ಪುತ್ರಿ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು. ಪೋಷಕರ ವಿರೋಧವಿದ್ದರೂ ಆಕೆ ಪ್ರೀತಿ ಮುಂದುವರಿಸಿದ್ದಳು.
ಅಕ್ಟೋಬರ್ 31ರಂದು ಸಿನಿಮಾ ತೋರಿಸುವುದಾಗಿ ಪುತ್ರಿಯನ್ನು ಬೈಕ್ ನಲ್ಲಿ ಕರೆದೊಯ್ದ ಓಂಕಾರ ಗೌಡ, ಆಕೆಗೆ ಇಷ್ಟದ ತಿಂಡಿ ಕೊಡಿಸಿ, ದೇವರ ದರ್ಶನ ಮಾಡಿಸಿ, ಆಭರಣದ ಅಂಗಡಿಯಲ್ಲಿ ಒಂದು ಜೊತೆ ಓಲೆ ಹಾಗೂ ಉಂಗುರ ಕೊಡಿಸಿದ್ದಾನೆ. ಬಳಿಕ ಎಚ್ ಎಲ್ ಸಿ ಕಾಲುವೆ ಬಳಿ ಮಗಳನ್ನು ಕರೆತಂದು ನಿಲ್ಲಿಸಿ, ಈಗ ಬರುತ್ತೇನೆ ಎಂದು ಸ್ಥಳದಿಂದ ತೆರಳಿದ್ದಾನೆ.
ಸ್ವಲ್ಪ ಸಮಯದ ಬಳಿಕ ಮಗಳಿಗೆ ತಿಳಿಯದಂತೆ ಬಂದು ಆಕೆಯನ್ನು ಕಾಲುವೆಗೆ ತಳ್ಳಿ ಸ್ಥಳದಿಂದ ತೆರಳಿದ್ದು, ಬಳಿಕ ಆತನ ಗೆಳೆಯ ಭೀಮಪ್ಪನ ಮನೆಯಲ್ಲಿ ಬೈಕ್ ಇಟ್ಟು ಸ್ಥಳದಿಂದ ಪರಾರಿಯಾಗಿದ್ದ.
ತನ್ನ ಪಾಪ ಕೃತ್ಯದ ಬಳಿಕ ಓಂಕಾರ ಗೌಡ ತಿರುಪತಿಗೆ ತೆರಳಿದ್ದಾನೆ. ತಿರುಪತಿ ದರ್ಶನ ಮುಗಿಸಿ ವಾಪಸ್ ಬರುವಾಗ ಕೊಪ್ಪಳದ ಬಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನವೆಂಬರ್ 1ರಂದು ಆರೋಪಿ ಓಂಕಾರ ಗೌಡ ಪತ್ನಿ ಗಂಡ ಹಾಗೂ ಪುತ್ರಿ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಈ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka