ನಿಮ್ಮದು ಡಬ್ಬಲ್ ಮೀನಿಂಗ್ ಫ್ಯಾಮಿಲಿ: ಜಗ್ಗೇಶ್ ಗೆ ತಿರುಗೇಟು ನೀಡಿದ ಸತೀಶ್ ಜಾರಕಿಹೊಳಿ ಅಭಿಮಾನಿಗಳು!
ಬೆಂಗಳೂರು: ಸತೀಶ್ ಜಾರಕಿಹೊಳಿ ವಾಮಾಚಾರದ ಫ್ಯಾಮಿಲಿಯವರು, ಸ್ಮಶಾನ ಪ್ರೀತಿಸುವವರು ಎಂಬ ರಾಜ್ಯ ಸಭಾ ಸದಸ್ಯ, ನಟ ಜಗ್ಗೇಶ್ ಹೇಳಿಕೆ ವಿರುದ್ಧ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜಗ್ಗೇಶ್ ಅವರನ್ನು ತರಾಟೆಗೆತ್ತಿಕೊಂಡಿದ್ದಾರೆ.
ಜಗ್ಗೇಶ್ ಬಕೆಟ್ ಹಿಡಿದು ರಾಜ್ಯಸಭೆ ಸದಸ್ಯರಾದವರು. ಸತೀಶ್ ಜಾರಕಿಹೊಳಿ ಸ್ಮಶಾನವನ್ನು ಪ್ರೀತಿಸುವವರೋ ಅಥವಾ ವಾಮಾಚಾರದ ಫ್ಯಾಮಿಲಿ ಅವರೋ ಅನ್ನೋದಲ್ಲ ಪ್ರಶ್ನೆ ಇರೋದು, ಅವರು ಚರ್ಚೆಗೆ ಆಹ್ವಾನಿಸಿದ್ದಾರೆ. ಚರ್ಚೆಗೆ ಹೋಗುವ ಮೂಲಕ ನಿಮ್ಮ ತಾಕತ್ತು ಪ್ರದರ್ಶಿಸಿ ಎಂದು ಸವಾಲು ಹಾಕಿದ್ದಾರೆ.
ಇನ್ನು ಕೆಲವರು ಜಗ್ಗೇಶ್ ಕಾಮಿಡಿ ಕಿಲಾಡಿ ಅಷ್ಟೆ, ಬಕೆಟ್ ಹಿಡಿಯುತ್ತಿದ್ದ ಮನುಷ್ಯ ಇದೀಗ ಟ್ಯಾಂಕ್ ಹಿಡಿಯಲು ಆರಂಭಿಸಿದ್ದಾರೆ ಎಂದಿದ್ದು, ಮಸಣದಲ್ಲಿರುವುದು ಮಹದೇವನಲ್ಲವೇ ‘ಕಡ್ಲೆ ಕಾಯಿ’ ಎಂದು ಜಗ್ಗೇಶ್ ಗೆ ಟಾಂಗ್ ನೀಡಿದ್ದಾರೆ.
ಸತೀಶ್ ಜಾರಕಿಹೊಳಿ ಸ್ಮಶಾನವನ್ನು ಪ್ರೀತಿಸುತ್ತಾರೆ. ಶಿವ ಕೂಡ ಸ್ಮಶಾನ ವಾಸಿ. ಒಂದಲ್ಲ ಒಂದು ದಿನ ನೀವೂ ಸ್ಮಶಾನವನ್ನು ಪ್ರೀತಿಸಲೇ ಬೇಕು. ಆದರೆ, ನೀವು ಪ್ರೀತಿಸುವುದು ಡಬ್ಬಲ್ ಮೀನಿಂಗ್ ಗಳನ್ನು ಎಂದು ಇತ್ತೀಚೆಗೆ ಜಗ್ಗೇಶ್ ನಟಿಸಿರುವ ಚಿತ್ರಗಳಲ್ಲಿನ ಅಸಭ್ಯ ಡಬ್ಬಲ್ ಮೀನಿಂಗ್ ಡೈಲಾಗ್ ಗಳನ್ನು ನೆನಪಿಸಿದ್ದಾರೆ.
ದೇವರನ್ನೇ ನಂಬದವರು, ವಾಮಾಚಾರವನ್ನು ನಂಬುತ್ತಾರಾ ಜಗ್ಗೇಶ್, ನಂದೂ ಒಂದು ಇರ್ಲಿ ಎಂಬಂತೆ ಹೇಳಿಕೆ ನೀಡಬೇಡಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka