ಝೀ ಕನ್ನಡದ ರಾಘವೇಂದ್ರ ಹುಣಸೂರುಗೆ ಬೈದ ಯೋಗರಾಜ್ ಭಟ್: ಆಡಿಯೋ ವೈರಲ್
ಝೀ ಕನ್ನಡ ವಾಹಿನಿಯಲ್ಲಿ ಡ್ರಾಮಾ, ಕಾಮಿಡಿ ಕಿಲಾಡಿಗಳು ಹೀಗೆ ಹಲವು ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿರುವ ಯೋಗರಾಜ್ ಭಟ್ ಹಾಗೂ ಅದೇ ವಾಹಿನಿಯ ಮನರಂಜನೆಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಸಂಬಂಧ ಹದಗೆಟ್ಟಿದೆ ಅನ್ನೋ ಸುದ್ದಿ ಇದೀಗ ಹರಿದಾಡ್ತಿದೆ.
ತಾವು ನಿರ್ದೇಶಿಸಿರುವ ಮುಂದಿನ ಚಿತ್ರಗಳ ಡಿಜಿಟಲ್ ಹಕ್ಕನ್ನು ಖರೀದಿಸುವುದಾಗಿ ಹೇಳಿದ್ದ ರಾಘವೇಂದ್ರ ಹುಣಸೂರು ಈಗ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಯೋಗರಾಜ್ ಭಟ್ ಅವರು ರಾಘವೇಂದ್ರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಯೋಗರಾಜ್ ಭಟ್ ಅವರು ಅತ್ಯಂತ ಕಠಿಣ ಮಾತುಗಳ ಮೂಲಕ ರಾಘವೇಂದ್ರ ಹುಣಸೂರು ವಿರುದ್ಧ ಕಿಡಿಕಾರುತ್ತಿರುವುದು ಆಡಿಯೋದಲ್ಲಿ ಕೇಳಿ ಬಂದಿದೆ. ಯೋಗರಾಜ್ ಭಟ್ ಅವರ ಧ್ವನಿಯನ್ನು ಹೋಲುವ ಈ ಆಡಿಯೋ ಕೇಳಿ ಸಾರ್ವಜನಿಕರ ಅಚ್ಚರಿ ವ್ಯಕ್ತಪಡಿಸುತ್ತಿದ್ದು, ಪರದೆ ಹಿಂದಿನ ಯೋಗರಾಜ್ ಭಟ್ ಅವರ ನಿಜ ರೂಪ ಇದೇನಾ? ಅಂತ ಪ್ರಶ್ನಿಸುತ್ತಿದ್ದಾರೆ.
ನಿನಗೆ ಕರೆ ಮಾಡಿದ್ರೂ ನೀನು ರಿಸಿವ್ ಮಾಡ್ತಿಲ್ಲ. ನೀನು ತುಂಬಾ ಹೈಟ್ ಗೆ ಹೋಗಿದ್ದೀಯಾ? ಅಲ್ಲಿಂದ ದಬಾರ್ ಆಗಿ ಬೀಳ್ತಿಯ, ಬಿದ್ದಾಗ ನನ್ನ ಕರ್ಮ ನಾನೂ ಬರ್ತಿನಿ, ನಿನ್ನನ್ನು ಎತ್ತುತ್ತೀನಿ , ಟಮಟೆ ಡಾನ್ಸ್ ಮಾಡಬೇಕಾದ್ರೂ ಮಾಡ್ತಿನಿ. ಆದರೆ, ನಿನ್ನ ಜೊತೆ ವ್ಯವಹಾರ ಮಾಡುವುದಿಲ್ಲ. ಬೀಳುವಾಗಿ ನೀಟಾಗಿ ಬೀಳು ತಲೆ ಹೊಡ್ಕೊ, ಬದುಕಿದ್ರೆ ಬರ್ತಿನಿ ಎಂಬಂತಹ ಪದಗಳು ಆಡಿಯೋದಲ್ಲಿ ಕೇಳಿ ಬಂದಿದೆ. ಈ ಆಡಿಯೋದಲ್ಲಿರುವ ಧ್ವನಿ ಯೋಗರಾಜ್ ಭಟ್ ಅವರ ಧ್ವನಿಯನ್ನು ಹೋಲುತ್ತಿದೆ. ಆದರೆ ಅವರೇ ಈ ಮಾತುಗಳನ್ನು ಹೇಳಿದರೆ ಅನ್ನೋದು ತಿಳಿದು ಬಂದಿಲ್ಲ.
ವ್ಯವಹಾರ ಅಂದ ಮೇಲೆ ನೂರಾರು ಸಮಸ್ಯೆಗಳಿರುತ್ತದೆ. ಆದರೆ, ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಬಗೆ ಹರಿಸುವ ಬದಲು ಒಬ್ಬ ಜವಾಬ್ದಾರಿತ ಸ್ಥಾನ ನಿರ್ವಹಿಸುತ್ತಿರುವ ವ್ಯಕ್ತಿಯ ಸಾವು ಬಯಸುವುದು, ಆತ ಬೀಳಲು ಬಯಸುವುದು ಇಂತಹ ಮಾತುಗಳು ಬೇಕಿತ್ತೇ? ಅನ್ನೋ ಮಾತುಗಳು ಕೇಳಿ ಬಂದಿವೆ. ಒಬ್ಬರ ಜೊತೆ ವ್ಯವಹಾರ ಸರಿಯಾಗಲಿಲ್ಲವಾದರೆ, ಇನ್ನೊಬ್ಬರ ಜೊತೆಗೆ ವ್ಯವಹರಿಸುವುದು ಬಿಟ್ಟು ಈ ರೀತಿಯ ಮಾತುಗಳು ಅಗತ್ಯವಿತ್ತೇ? ಇದರಿಂದಾಗಿ ಯೋಗರಾಜ್ ಭಟ್ ಅವರೇ ಗೌರವ ಕಳೆದುಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka