ಚಾರ್ಮಾಡಿ ಘಾಟ್ ನಲ್ಲಿ ಕೆಟ್ಟು ನಿಂತ ಪೊಲೀಸ್ ವಾಹನ: ವಾಹನ ಸವಾರರು ಹೈರಾಣ
ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯ ಹನ್ನೊಂದನೇ ತಿರುವಿನಲ್ಲಿ ಪೊಲೀಸ್ ಡಿಆರ್ ವಾಹನ ಕೆಟ್ಟು ನಿಂತ ಪರಿಣಾಮ ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.
ಚಿಕ್ಕಮಗಳೂರಿನ ಪೊಲೀಸ್ ಡಿಆರ್ ವಾಹನ ರಸ್ತೆಗೆ ಕೆಟ್ಟು ನಿಂತಿದ್ದರಿಂದ ಪ್ರವಾಸಿಗರು ಪರದಾಡುವಂತಾಯಿತು. ಎರಡು ಬದಿಯಿಂದ ವಾಹನಗಳು ಏಕಕಾಲದಲ್ಲಿ ಸಂಚರಿಸಲಾಗದೇ ಕಿ.ಮೀ. ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನ ಕೆಟ್ಟು ನಿಂತಿದ್ದರಿಂದ ಒಂದು ಬದಿ ವಾಹನ ಸಾಗಲು ಹರಸಾಹಸ ಪಡಬೇಕಾಯಿತು.
ವಾರಾಂತ್ಯವಾಗಿರುವುದರಿಂದ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗಿತ್ತು. ಸಂಜೆ ಏಳು ಗಂಟೆ ವರೆಗೂ ವಾಹನ ರಿಪೇರಿ ಮಾಡಲಾಗುತ್ತಿತ್ತು. ಅಷ್ಟೊತ್ತಿನವರೆಗೂ ಟ್ರಾಫಿಕ್ ಜಾಮ್ ನಿಂದ ಜನರು ತೊಂದರೆ ಅನುಭವಿಸಬೇಕಾಯಿತು ಎಂದು ಪ್ರಯಾಣಿಕ ಸತೀಶ್ ಎಂಬವರು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka