ಸುರತ್ಕಲ್ ಟೋಲ್ ತೆರವಿಗೆ ಆಗ್ರಹಿಸಿ DYFI ಆಯೋಜಿಸಿದ್ದ ಬೈಕ್ ರಾಲಿಗೆ ಪೊಲೀಸರ ತಡೆ
ಮಂಗಳೂರಿನ ಸುರತ್ಕಲ್ ಟೋಲ್ ತೆರವಿಗಾಗಿನ ಹೋರಾಟ ಬೆಂಬಲಿಸಿ ಡಿವೈಎಫ್ಐ ಸಂಘಟನೆ ವತಿಯಿಂದ ಆಯೋಜಿಸಿದ್ದ ಬೈಕ್ ರ್ಯಾಲಿಗೆ ಮಂಗಳೂರು ನಗರ ಪೊಲೀಸರು ತಡೆ ಒಡ್ಡಿದ ಘಟನೆ ನಡೆದಿದೆ.
ಸುರತ್ಕಲ್ ಟೋಲ್ ತೆರವು ಹೋರಾಟ ಬೆಂಬಲಿಸಿ ಡಿವೈಎಫ್ ಐ ಸಂಘಟನೆ ವತಿಯಿಂದ ಆಯೋಜಿಸಿದ್ದ ಬೈಕ್ ರ್ಯಾಲಿಯನ್ನು ನಡೆಸದಂತೆ ಪೊಲೀಸರು ತಡೆವೊಡ್ಡಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಟೋಲ್ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟನೆ ಮುಂದುವರೆಯುತ್ತಿದ್ದು, ಹೋರಾಟಕ್ಕೆ ಬೆಂಬಲ ಸೂಚಿಸುವ ದೃಷ್ಠಿಯಿಂದ ಡಿವೈಎಫ್ ಐ ವತಿಯಿಂದ ಉರ್ವ ಸ್ಟೋರ್ ಜಂಕ್ಷನ್ ನಿಂದ ಸುರತ್ಕಲ್ ಟೋಲ್ ಗೇಟ್ ವರೆಗೆ ಬೈಕ್ ರ್ಯಾಲಿ ಆಯೋಜನೆ ಮಾಡಲಾಗಿತ್ತು.
ಆದರೆ ರ್ಯಾಲಿಯನ್ನು ತಡೆಹಿಡಿದ ಪೊಲೀಸರು ಮುಂದುವರೆಸದಂತೆ ಬ್ಯಾರಿಕೇಡ್ ಗಳನ್ನು ಅಡ್ಡವಿಟ್ಟು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ನೂರಾರು ಪ್ರತಿಭಟನಾಕಾರರನ್ನು ತಡೆವೊಡ್ಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದ್ರೆ ರ್ಯಾಲಿ ಆರಂಭಕ್ಕೆ ಮುನ್ನವೇ ಎಸಿಪಿ ಪಿ ಎ ಹೆಗ್ಡೆ ನೇತೃತ್ವದಲ್ಲಿ ತಡೆಹಿಡಿದ ಪೊಲೀಸರು ಮುಂದುವರೆಸದಂತೆ ಬ್ಯಾರಿಕೇಡ್ ಗಳನ್ನು ಅಡ್ಡವಿಟ್ಟು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka