ಶ್ರದ್ಧಾಳನ್ನು ತುಂಡು ತುಂಡಾಗಿ ಕತ್ತರಿಸಲು ಅಫ್ತಾಬ್ ಗೆ ವೆಬ್ ಸೀರಿಸ್ ಪ್ರೇರಣೆಯಾಗಿತ್ತಂತೆ!
ದೆಹಲಿ: ಶ್ರದ್ಧಾ ಎಂಬ ಯುವತಿಯನ್ನು ಪ್ರೇಮಿಯೇ ತುಂಡು ತುಂಡಾಗಿ ಕತ್ತರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಕ್ಷಣಕ್ಕೊಂದು ತಿರುವು ಸಿಗುತ್ತಿದ್ದು, ಆರೋಪಿ ನೀಡುತ್ತಿರುವ ಮಾಹಿತಿ ಕ್ಷಣಕ್ಷಣಕ್ಕೂ ಬೆಚ್ಚಿ ಬೀಳೀಸುವಂತಿದೆ.
ಶ್ರದ್ಧಾಳನ್ನು ಇಷ್ಟೊಂದು ಕ್ರೂರವಾಗಿ ಕೊಲ್ಲಲು ಅಫ್ತಾಬ್ ವೆಬ್ ಸಿರೀಸ್ ನೋಡಿ ಯೋಜನೆ ರೂಪಿಸಿದ್ದ ಎಂದು ಹೇಳಿಕೊಂಡಿದ್ದಾನೆ. . Dexter ಎಂಬ ವೆಬ್ ಸೀರೀಸ್ ನೋಡಿದ ಮೇಲೆ ಶ್ರದ್ಧಾಳನ್ನು ಕೆಟ್ಟ ರೀತಿಯಲ್ಲಿ ಕೊಲ್ಲುವ ಬಗ್ಗೆ ಆಲೋಚನೆ ಮಾಡಿದೆ ಎಂದು ಆತ ಹೇಳಿದ್ದಾನೆ.
Dexter ಎಂಬುದು ಕ್ರೈಂ ಡ್ರಾಮಾ ಸರಣಿಯಾಗಿದ್ದು, ಇದರಲ್ಲಿ ‘ಡೆಕ್ಸ್ಟರ್’ ಪಾತ್ರವನ್ನು ಮೈಕೆಲ್ ಸಿ. ಹಾಲ್ ನಿರ್ವಹಿಸಿದ್ದಾರೆ. ಬಾಲ್ಯದಲ್ಲಿ, ತನ್ನ ತಾಯಿಯನ್ನು ಗರಗಸದಿಂದ ಕ್ರೂರವಾಗಿ ಕೊಲ್ಲುವುದನ್ನು ನೋಡುತ್ತಾನೆ, ಅದು ಅವನ ಹೃದಯ ಮತ್ತು ಮನಸ್ಸಿನಲ್ಲಿ ಉಳಿಯುತ್ತದೆ. ಅವರನ್ನು ಮಿಯಾನಿ ಪೊಲೀಸ್ ಅಧಿಕಾರಿ ಹ್ಯಾರಿ ಮೋರ್ಗನ್ ದತ್ತು ಪಡೆಯುತ್ತಾರೆ. ಹ್ಯಾರಿ ‘ಡೆಕ್ಸ್ಟರ್’ನ ಮನಸ್ಸಿಗೆ ಆದ ಆಘಾತವನ್ನು ಗುರುತಿಸುತ್ತಾರೆ. ನಂತರ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಾನೂನಿನ ಲೋಪದೋಷಗಳ ಲಾಭವನ್ನು ಪಡೆಯುವ ಅಪರಾಧಿಗಳನ್ನು ಕೊಲ್ಲಲು ಸಹಾಯ ಮಾಡುತ್ತಾನೆ.
Dexter ನಲ್ಲಿರುವ ಹಿಂಸಾತ್ಮಕ ಮಾದರಿಯ ಹತ್ಯೆಯನ್ನೇ ಅನುಸರಿಸಿ ಶ್ರದ್ಧಾಳನ್ನು ಭೀಕರವಾಗಿ ಅಫ್ತಾಬ್ ಕೊಂದಿದ್ದಾನೆ ಎನ್ನಲಾಗಿದೆ. ಅಫ್ತಾಬ್ ಗೆ ಶ್ರದ್ಧಾ ಅಲ್ಲದೇ ಇತರ ಮಹಿಳೆಯರ ಜೊತೆಗೂ ಸಂಬಂಧ ಇದ್ದು, ಈ ವಿಚಾರಕ್ಕೆ ಶ್ರದ್ಧಾ ಗಲಾಟೆ ಮಾಡುತ್ತಿದ್ದಳು ಎನ್ನಲಾಗಿದೆ.
ಶ್ರದ್ಧಾಳಿಗೆ ಅಫ್ತಾಬ್ ಪ್ರಾಮಾಣಿಕವಾಗಿರಲಿಲ್ಲ. ಆಕೆಯು ಅಫ್ತಾಬ್ ಮೇಲೆ ಪ್ರೀತಿಯ ಭಾವನೆ ಹೊಂದಿದ್ದಳು ಹಾಗಾಗಿ ಆತನನ್ನು ಬೇರೆಯವರಿಗೆ ಬಿಟ್ಟುಕೊಡಲು ಸಿದ್ಧವಿರಲಿಲ್ಲ. ಆದರೆ ಇದಕ್ಕೆ ತದ್ವಿರುದ್ಧವಾಗಿದ್ದ ಅಫ್ತಾಬ್ ಶ್ರದ್ಧಾಳನ್ನು ಮುಗಿಸುವ ನಿರ್ಧಾರಕ್ಕೆ ಬಂದಿದ್ದು, ಭೀಕರವಾಗಿ ಹತ್ಯೆ ಮಾಡಿರುವುದೇ ಅಲ್ಲದೇ ಆಕೆಯ ಮೃತದೇಹವನ್ನು ತುಂಡು ತುಂಡಾಗಿಸಿ ಫ್ರಿಜರ್ ನಲ್ಲಿ ಇಟ್ಟು ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದಾನೆ.