ಭಾರತದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ಹಿಂದೂ ಆಗಿದ್ದಾನೆ: ಮೋಹನ್ ಭಾಗವತ್ ಹೇಳಿಕೆ
ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ಹಿಂದೂ ಆಗಿದ್ದಾನೆ ಮತ್ತು ಎಲ್ಲರ ಡಿಎನ್ ಎ ಒಂದೇ ಆಗಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ.
ಛತ್ತೀಸ್‌ಗಢನ ಸುರ್ಗುಜಾ ಜಿಲ್ಲೆಯ ಅಂಬಿಕಾಪುರದಲ್ಲಿ ಆರೆಸ್ಸೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈವಿಧ್ಯತೆಯಲ್ಲೇ ಭಾರತದ ಏಕತೆ ಇದೆ. ಇದು ಪ್ರಾಚೀನ ಕಾಲದಿಂದಲೂ ಭಾರತದ ಹೆಮ್ಮೆಯ ಮಂತ್ರವಾಗಿದೆ. ಪ್ರತಿಯೊಬ್ಬರನ್ನು ಜತೆಗೆ ಕೊಂಡೊಯ್ಯವ ನೀತಿಯನ್ನು ಹಿಂದುತ್ವ ಮಾತ್ರ ನಂಬುತ್ತದೆ ಎಂದು ಅಭಿಪ್ರಾಯಪಟ್ಟರು.
ಯಾರು ಭಾರತವನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುತ್ತಾರೋ ಮತ್ತು ವೈವಿಧ್ಯತೆಯಲ್ಲಿ ಸಾಂಸ್ಕೃತಿಕ ಏಕತೆಯೊಂದಿಗೆ ಬದಕುತ್ತಾರೋ ಧರ್ಮ, ಸಂಸ್ಕೃತಿ, ಭಾಷೆ ಮತ್ತು ಆಚಾರ ವಿಚಾರ, ಉಡುಗೆ ತೊಡುಗೆ ಬೇರೆ ಬೇರೆ ಇದ್ದರೂ ಇದೇ ದಿಸೆಯಲ್ಲಿ ಅವರ ಚಿಂತನೆಗಳಿರುತ್ತವೆ ಎಂದು ಭಾಗವತ್ ಹೇಳಿದರು.
ಹಿಂದುತ್ವ ಸಿದ್ಧಾಂತವು ವೈವಿಧ್ಯತೆಯನ್ನು ಪರಿಗಣಿಸುತ್ತದೆ ಮತ್ತು ಜನರ ಏಕತೆಯನ್ನು ಬೆಂಬಲಿಸುತ್ತದೆ. ಪ್ರತಿಯೊಬ್ಬರ ನಂಬಿಕೆಯನ್ನು ನಾವು ಗೌರವಿಸಬೇಕು ಎಂದು ಅವರು ಕರೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka