ನನ್ನ ಕಿಡ್ನಿ ಕದ್ದ ವೈದ್ಯನ ಕಿಡ್ನಿ ನನಗೆ ನೀಡಬೇಕು: ಮಹಿಳೆಯ ಮೂಕ ರೋದನೆ
ಗರ್ಭಾಶಯದ ಸೋಂಕಿಗೆ ಚಿಕಿತ್ಸೆ ಪಡೆಯಲು ಹೋಗಿದ್ದ ಮಹಿಳೆಯ ಕಿಡ್ನಿ ಕದ್ದಿದ್ದ ವೈದ್ಯನ ಕಿಡ್ನಿಯನ್ನು ನನಗೆ ನೀಡಬೇಕು ಎಂದು ಮಹಿಳೆ ಒತ್ತಾಯಿಸಿದ್ದು, ಸರ್ಕಾರ ತಕ್ಷಣವೇ ವೈದ್ಯನನ್ನು ಬಂಧಿಸಿ ಆತನ ಕಿಡ್ನಿಯನ್ನು ತನಗೆ ಜೋಡಿಸುವಂತೆ ಮಹಿಳೆ ಒತ್ತಾಯಿಸಿದ್ದಾರೆ.
ಬಿಹಾರದ ಮುಜಾಫರ್ ಪುರ ಪಟ್ಟಣದ ಮಹಿಳೆ , ಸುನೀತಾ ದೇವಿ (38) ಗರ್ಭಾಶಯದ ಸೋಂಕಿನ ಹಿನ್ನೆಲೆಯಲ್ಲಿ ವೈದ್ಯ ಆರ್.ಕೆ.ಸಿಂಗ್ ಎಂಬಾತನಿಂದ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆ ನೀಡುವ ವೇಳೆ ಶಸ್ತ್ರ ಚಿಕಿತ್ಸೆಯ ನೆಪದಲ್ಲಿ ಆರ್.ಕೆ.ಸಿಂಗ್ ಕಿಡ್ನಿ ಕಳವು ಮಾಡಿದ್ದ. ಇದರ ಪರಿಣಾಮವಾಗಿ ಇದೀಗ ಸುನೀತಾ ದೇವಿ ಅವರು ಶಾಶ್ವತ ಡಯಾಲಿಸಿಸ್ ಗೆ ಒಳಗಾಗುವಂತಾಗಿದೆ.
ಕೃತ್ಯದ ಬಳಿಕ ಆರೋಪಿ ವೈದ್ಯ ಪರಾರಿಯಾಗಿದ್ದು, ಬಿಹಾರ ಪೊಲೀಸರಿಗೆ ಆರೋಪಿಯನ್ನು ಬಂಧಿಸಲು ಇನ್ನೂ ಸಾಧ್ಯವಾಗಿಲ್ಲ. ಈತನಿಗೆ ಪ್ರಭಾವಿಗಳ ಜೊತೆಗೆ ನಂಟು ಇರುವ ಸಾಧ್ಯತೆಗಳು ಕೂಡ ಇವೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಈ ನಡುವೆ ಸುನೀತಾ ದೇವಿ ಅವರು, ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಅವರ ಕಿಡ್ನಿಯನ್ನು ನನಗೆ ನೀಡಬೇಕು ಎಂದು ಆಗ್ರಹಿಸಿ ಶಿಕ್ಷೆ ನೀಡುವುದಾಗಿ ಮಹಿಳೆ ಹೇಳಿದ್ದಾರೆ. ತನ್ನ ಗರ್ಭಾಶಯದ ಸೋಂಕಿಗೆ ಚಿಕಿತ್ಸೆ ನೀಡಲು ಶಸ್ತ್ರಚಿಕಿತ್ಸೆ ಮಾಡುವ ನೆಪದಲ್ಲಿ ಸೆಪ್ಟೆಂಬರ್ 3 ರಂದು ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ವೈದ್ಯ ಆರ್.ಕೆ. ಸಿಂಗ್ ತನ್ನ ಮೂತ್ರಪಿಂಡವನ್ನು ತೆಗೆದುಹಾಕಿದ್ದಾರೆ ಎಂದು ಸುನೀತಾ ಆರೋಪಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka