ಮಗನ ಕಾರು ಅಪಘಾತದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಜಗ್ಗೇಶ್!
ನಟ ಜಗ್ಗೇಶ್ ಅವರ ಪುತ್ರ ಯತೀಶ್ ಕಾರು ಅಪಘಾತ ಪ್ರಕರಣ ಭಾರೀ ಸದ್ದು ಮಾಡಿತ್ತು. ಅಪಘಾತದ ಸಂದರ್ಭದಲ್ಲಿ ಕಾರು ಅಪಘಾತ ಮಾತ್ರವಲ್ಲದೇ ಜಗ್ಗೇಶ್ ಪುತ್ರನ ವಿಚಿತ್ರ ವರ್ತನೆ ಕೂಡ ಭಾರೀ ಸುದ್ದಿಯಾಗಿತ್ತು.
ಮಾಧ್ಯಮಗಳ ಪ್ರಶ್ನೆಗಳಿಗೂ ಜಗ್ಗೇಶ್ ಪುತ್ರ ನಿರ್ಲಕ್ಷ್ಯದ ಉತ್ತರವನ್ನು ನೀಡಿದ್ದರು. ಕಾರು ಹೇಗೆ ಅಪಘಾತವಾಯ್ತು ಎಂದು ಪ್ರಶ್ನಿಸಿದಾಗ “ಟಿಸ್ಕ್ಯಾಂವ್ ಅಂತ ಎಗರಿ ಬಿಡ್ತು” ಅನ್ನೋ ಹೇಳಿಕೆ ನೀಡಿ ಸ್ಥಳದಿಂದ ತೆರಳಿದ್ದರು. ಈ ಘಟನೆಯ ಬಗ್ಗೆ ಭಾರೀ ಮೌನ ವಹಿಸಿದ್ದ ನಟ ಜಗ್ಗೇಶ್ ಇದೀಗ ಪುತ್ರನ ಕಾರು ಅಪಘಾತದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.
ಮಗನಿಗೆ ಬುಧಭುಕ್ತಿ ಇದ್ದುದರಿಂದಾಗಿ ಅಪಘಾತವಾಗಿದೆ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ. ಮಗನಿಗೆ ಬುಧಭುಕ್ತಿ ಇತ್ತು ಹಾಗಾಗಿ ಹುಷಾರಾಗಿರು ಎಂದು ನಾನು ಹೇಳಿದ್ದೆ. ಅವತ್ತು ಎ.ಆರ್.ಬಾಬು ಪುತ್ರನಿಗೆ ಬಿರಿಯಾನಿ ಮಾಡಿಸು ಎಂದು ಹೇಳಿ ಹೊರಟ, ಬುಧಭುಕ್ತಿ ಇದ್ದ ಕಾರಣಕ್ಕಾಗಿಯೇ ಕಾರು ಅಪಘಾತವಾಗಿದೆ ಎಂದರು.
ಇನ್ನೂ ತಮ್ಮ ಕೋಮಲ್ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಕೋಮಲ್ ಗೆ ಕೇತು ದೆಸೆ ಇತ್ತು. ಇಂತಹ ಸಂದರ್ಭದಲ್ಲಿ ಏನೇ ಕೆಲಸ ಮಾಡಿದ್ರೂ ಯಶಸ್ಸು ಆಗೋದಿಲ್ಲ. ಹಾಗಾಗಿ ಸಿನಿಮಾ ಮಾಡಬೇಡ ಎಂದು ನಾನೇ ಹೇಳಿದ್ದೆ. ಈಗ ಕೇತು ದೆಸೆ ಕಳೆದಿದೆ. ಇನ್ನು ಮುಂದೆ ಸಿನಿಮಾ ಹಿಟ್ ಆಗುತ್ತದೆ ಎಂದು ಜಗ್ಗೇಶ್ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka