ದಕ್ಷಿಣ ಕನ್ನಡ ಜಿಲ್ಲೆಯ ಬಹುಜನ ಚಳುವಳಿಯ ಮತ್ತೋರ್ವ ಪ್ರಮುಖ ನಾಯಕ ದಾಸಪ್ಪ ಎಡಪದವು ಇನ್ನಿಲ್ಲ - Mahanayaka
5:24 AM Wednesday 11 - December 2024

ದಕ್ಷಿಣ ಕನ್ನಡ ಜಿಲ್ಲೆಯ ಬಹುಜನ ಚಳುವಳಿಯ ಮತ್ತೋರ್ವ ಪ್ರಮುಖ ನಾಯಕ ದಾಸಪ್ಪ ಎಡಪದವು ಇನ್ನಿಲ್ಲ

dasappa yedapadavu
19/11/2022

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಹುಜನ ಸಮಾಜ ಪಾರ್ಟಿ(BSP)ಯ ಜಿಲ್ಲಾಧ್ಯಕ್ಷರಾದ ದಾಸಪ್ಪ ಎಡಪದವು ಅವರು ಇಂದು ಮುಂಜಾನೆ 4 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮುಂಜಾನೆ ವೇಳೆಗೆ ಎದೆನೋವಿನಿಂದ ಅಸ್ವಸ್ಥರಾದ ದಾಸಪ್ಪ ಅವರನ್ನು ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅವರು ಆಸ್ಪತ್ರೆಗೆ ತಲುಪುವ ಮೊದಲೇ ಕೊನೆಯುಸಿರೆಳೆದರು ಎಂದು ಮೂಲಗಳಿಂದ ತಿಳಿದು ಬಂದಿದೆ.

ದಾಸಪ್ಪ ಎಡಪದವು ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಹುಜನ ಚಳುವಳಿಯ ಪ್ರಭಾವಿ ನಾಯಕರಾಗಿದ್ದು, ಜಿಲ್ಲೆಯ ದಲಿತ ಪರ ಹೋರಾಟ, ಸಂಘಟನೆಗಳ ಪೋಷಕರೂ ಆಗಿದ್ದರು. ಯುವ ನಾಯಕರಿಗೂ ಮಾದರಿಯಾಗಿದ್ದ ಅವರು, ಯುವಕರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ  ಅವರ ನಿಧನದಿಂದಾಗಿ ಅವರ ಅಭಿಮಾನಿಗಳು, ಚಳುವಳಿಯ ಒಡನಾಡಿಗಳು ತೀವ್ರ ದುಃಖಿತರಾಗಿದ್ದಾರೆ.

ಇತ್ತೀಚೆಗಷ್ಟೇ ಬಹುಜನ ಚಳುವಳಿಯ ಹಿರಿಯ ನಾಯಕರಾದ ಪಿ.ಡೀಕಯ್ಯನವರು ನಿಧನರಾಗಿದ್ದರು. ಇದರ ಬೆನ್ನಲ್ಲೇ ಇದೀಗ ದಾಸಪ್ಪ ಎಡಪದವು ಕೂಡ ನಿಧನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುಜನ ಚಳುವಳಿ ಇಬ್ಬರು ಪ್ರಮುಖ ನಾಯಕರನ್ನು  ಕಳೆದುಕೊಂಡಿದೆ.

ಮಹಾನಾಯಕ ಮಾಧ್ಯಮ 2 ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ದಾಸಪ್ಪ ಎಡಪದವು ಅವರು ಮಾಧ್ಯಮಕ್ಕೆ ಶುಭ ಹಾರೈಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ