ಮಂಗಳೂರಿನಲ್ಲಿ ರಿಕ್ಷಾ ಸ್ಫೋಟಕ್ಕೆ ತಿರುವು: ಆಕಸ್ಮಿಕ ಸ್ಫೋಟ ಅಲ್ಲ, ಉಗ್ರ ಕೃತ್ಯ: ಡಿಜಿಪಿ
ಮಂಗಳೂರು: ನಗರದ ನಾಗುರಿಯಲ್ಲಿ ಶನಿವಾರ ಆಟೋ ರಿಕ್ಷಾದೊಳಗೆ ಸ್ಪೋಟವುಂಟಾದ ಘಟನೆಗೆ ಸಂಬಂಧಿಸಿದಂತೆ, ಈ ಸ್ಫೋಟವು ಆಕಸ್ಮಿಕವಲ್ಲ. ಆದರೆ ಗಂಭೀರ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಈ ಕೃತ್ಯ ಎಸೆಯಲಾಗಿದೆ. ಇದೊಂದು ಉಗ್ರ ಕೃತ್ಯವಾಗಿದೆ. ಈ ಬಗ್ಗೆ ರಾಜ್ಯ ಪೊಲೀಸರು ಕೇಂದ್ರ ತನಿಖಾ ತಂಡದೊಂದಿಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಇದು ಆಕಸ್ಮಿಕ ಸ್ಫೋಟವಲ್ಲ. ಗಂಭೀರ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಮಾಡಿದ ಭಯೋತ್ಪಾದನೆಯ ಕೃತ್ಯವಾಗಿದೆ. ಕರ್ನಾಟಕ ರಾಜ್ಯ ಪೊಲೀಸರು ಕೇಂದ್ರ ಏಜೆನ್ಸಿಗಳೊಂದಿಗೆ ಇದರ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಕಂಕನಾಡಿ ರೈಲು ನಿಲ್ದಾಣದ ಕಡೆಯಿಂದ ಸಂಜೆ 4:30ರ ಸುಮಾರಿಗೆ ಬರುತ್ತಿದ್ದ ಆಟೋ ರಿಕ್ಷಾಕ್ಕೆ ನಾಗುರಿಯಲ್ಲಿ ಓರ್ವ ಹತ್ತಿದ್ದು ಆತ ಪಂಪ್ ವೆಲ್ ಕಡೆಗೆ ಹೋಗುವಂತೆ ಚಾಲಕನಿಗೆ ಸೂಚಿಸಿದ್ದ. ಅದರಂತೆ ರಿಕ್ಷಾ ಸಂಚರಿಸುತ್ತಿದ್ದಾಗ ಘಟನೆ ಸಂಭವಿಸಿದೆ. ರಿಕ್ಷಾದಲ್ಲಿ ಸ್ಫೋಟಗೊಂಡ ಸ್ಥಿತಿಯಲ್ಲಿ ಕುಕ್ಕರ್ ಪತ್ತೆಯಾಗಿದೆ. ಆಟೋರಿಕ್ಷಾದ ಒಳಗಿನ ಕೆಲವು ಭಾಗ ಗಳು ಸುಟ್ಟು ಹೋಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka