ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್ ಖಾಲಿ ಮಾಡಿಸಿ, ಗೋಮೂತ್ರದಿಂದ ಶುದ್ಧ ಮಾಡಿದ್ರು!
ಚಾಮರಾಜನಗರ: ದಲಿತ ಸಮುದಾಯದ ಮಹಿಳೆ ನಳ್ಳಿಯಿಂದ ನೀರು ಕುಡಿದಿದ್ದಕ್ಕೆ ಇಡೀ ಟ್ಯಾಂಕ್ ನ ನೀರು ಖಾಲಿ ಮಾಡಿಸಿ, ಟ್ಯಾಂಕ್ ನ್ನು ಸ್ವಚ್ಛಗೊಳಿಸಿದ ಘಟನೆ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿದೆ.
ದಲಿತ ಯುವಕನ ವಿವಾಹದಲ್ಲಿ ಭಾಗಿಯಾಗಲು ವಧುವಿನ ಕಡೆಯಿಂದ ಹೆಚ್.ಡಿ.ಕೋಟೆ ತಾಲ್ಲೂಕಿನ ಸರಗೂರಿಗೆ ಜನರು ಬಂದಿದ್ದರು ಎನ್ನಲಾಗಿದೆ. ಮಧ್ಯಾಹ್ನದ ಊಟ ಮುಗಿಸಿ ಬಂದಿದ್ದ ದಲಿತ ಮಹಿಳೆಯೊಬ್ಬರು ಈ ವೇಳೆ ಬಾಯಾರಿದ ಮಹಿಳೆಯೊಬ್ಬರು ತೊಂಬೆಯ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ. ಇದನ್ನು ಅದೇ ಬೀದಿಯವರು ನೋಡಿದ್ದಾರೆ. ಮಹಿಳೆ ದಲಿತೆ ಅನ್ನೋದು ತಿಳಿಯುತ್ತಿದ್ದಂತೆಯೇ ಇಡೀ ಟ್ಯಾಂಕ್ ಖಾಲಿ ಮಾಡಿಸಿ ಗೋ ಮೂತ್ರದಿಂದ ಶುದ್ಧ ಮಾಡಿಸಿದ್ದಾರೆ.
ರಾಜ್ಯದಲ್ಲಿ ಧರ್ಮ ರಕ್ಷಣೆ ಅಂತ ಕೂಗುವ ಹಿಂದುತ್ವ ಸಂಘಟನೆಯ ಘಟಾನುಘಟಿ ನಾಯಕರು ಅಸ್ಪೃಷ್ಯತೆ ವಿಚಾರ ಬಂದಾಗ ನಪುಂಸಕತನ ಮೆರೆಯುತ್ತಿದ್ದಾರೆ. ತಾಕತ್ ಇದ್ರೆ, ಈಗ ಸ್ಥಳಕ್ಕೆ ಹೋಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ. ಕೈ ಕಡಿಯುತ್ತೇವೆ, ತಲೆ ತೆಗೆಯುತ್ತೇವೆ ಅಂತ ಹೇಳಿಕೆ ಕೊಡಿ ಎಂಬ ಆಕ್ರೋಶದ ಮಾತುಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka