ಮಗುಚಿ ಬಿದ್ದ ಟಾಟಾ ಏಸ್ ವಾಹನ | ಸಾವು ಬದುಕಿನ ನಡುವೆ ಹೋರಾಡುತ್ತಿರುವ ನಾಲ್ವರು ಮಹಿಳೆಯರು
20/12/2020
ಹುಣಸೂರು: ಟಾಟಾ ಏಸ್ ವಾಹನವೊಂದು ಮಗುಚಿ ಬಿದ್ದ ಪರಿಣಾಮ 12 ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಹುಣಸೂರು- ಹೆಚ್.ಡಿ.ಕೋಟೆ ಗಡಿಭಾಗದಲ್ಲಿ ನಡೆದಿದೆ.
ನಂಜನಗೂಡಿನ ಶ್ರೀಕಂಠೇಶ್ವರ ದೇವರ ದರ್ಶನ ಪಡೆಯಲು ಟಾಟಾ ಏಸ್ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಹುಣಸೂರು ಎಚ್ ಡಿ ಕೋಟೆ ಗಡಿಭಾಗದ ಆಲನಹಳ್ಳಿ ಕೃಷ್ಣ ಎಂಬವರಿಗೆ ಸೇರಿದ ತೋಟದ ಬಳಿಯಲ್ಲಿ ವಾಹನ ಮಗುಚಿ ಬಿದ್ದಿದೆ.
ಘಟನೆಯಲ್ಲಿ ನಾಲ್ವರು ಮಹಿಳೆಯರಿಗೆ ಗಂಭೀರವಾಗಿ ಗಾಯವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇನ್ನಿತರರಿಗೆ ಕೈ, ಬೆನ್ನು, ಮೂಳೆಗಳು ಮುರಿದಿವೆ ಎಂದು ತಿಳಿದು ಬಂದಿದೆ.
ಅಪಘಾತದ ಮಾಹಿತಿ ಪಡೆದು ಗಾಯಾಳುಗಳು ದಾಖಲಾಗಿರುವ ಮೈಸೂರಿನ ಖಾಸಗಿ ಆಸ್ಪತ್ರೆಗೆ ಹುಣಸೂರು ಶಾಸಕ ಎಸ್ ಪಿ ಮಂಜುನಾಥ್ ಭೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿ ಸಾಂತ್ವಾನ ಹೇಳಿದ್ದಾರೆ.