ಕಾಂಗ್ರೆಸ್ ನಾಯಕರ ಸೋಲಿಗೆ ಒಳ ಒಪ್ಪಂದ:  ಇದೊಂದು ಅನಗತ್ಯ ಚರ್ಚೆ | ಪ್ರಬುದ್ಧ ನುಡಿಗಳನ್ನಾಡಿದ ಪರಮೇಶ್ವರ್ - Mahanayaka

ಕಾಂಗ್ರೆಸ್ ನಾಯಕರ ಸೋಲಿಗೆ ಒಳ ಒಪ್ಪಂದ:  ಇದೊಂದು ಅನಗತ್ಯ ಚರ್ಚೆ | ಪ್ರಬುದ್ಧ ನುಡಿಗಳನ್ನಾಡಿದ ಪರಮೇಶ್ವರ್

20/12/2020

ತುಮಕೂರು: 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ಸಿದ್ದರಾಮಯ್ಯ ಒಳ ಒಪ್ಪಂದ ಮಾಡಿಕೊಂಡಿದ್ದರು ಎನ್ನುವಂತಹ ಚರ್ಚೆ ಅನಗತ್ಯ ಎಂದು ಮಾಜಿ ಉಪ ಮುಖ್ಯಮಂತ್ರಿ,  ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.

“ನನ್ನ ಸೋಲಿಗೆ ಪಕ್ಷದೊಳಗೆ  ಒಳ ಒಪ್ಪಂದವಾಗಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ ಬಳಿಕ, ಸಚಿವ ಈಶ್ವರಪ್ಪ ಅವರು, ಜಿ.ಪರಮೇಶ್ವರ್ ಅವರ ಸೋಲಿನ ಬಗ್ಗೆ ಪ್ರಶ್ನೆ ಎತ್ತಿದ್ದರು. ಆದರೆ ಈ ಪ್ರಶ್ನೆಗೆ ಜಿ.ಪರಮೇಶ್ವರ್ ಅವರು ಪ್ರಬುದ್ಧ ರಾಜಕಾರಣಿಯಂತೆ ಉತ್ತರ ನೀಡಿದ್ದಾರೆ.


Provided by

 2018ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಸಿದ್ದರಾಮಯ್ಯ ಸೋಲಿನ ಬಗ್ಗೆ ಯಾವುದೇ ವರದಿ ಬಂದಿರಲಿಲ್ಲ. ಅವರು ಬೇರೆ ಬೇರೆ ಕಾರಣಗಳಿಂದ ಸೋತಿದ್ದಾರೆ. ನಮ್ಮ ಪಕ್ಷದವರೇ ಸೇರಿ ಅವರನ್ನು ಸೋಲಿಸುತ್ತಾರೆ ಎನ್ನುವ ವರದಿ ಆಗ ಬಂದಿರಲಿಲ್ಲ ಎಂದು ಪರಮೇಶ್ವರ್  ಹೇಳಿದರು.

2013ರ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ಕೆ.ಎಸ್‌.ಈಶ್ವರಪ್ಪ ಸೇರಿದಂತೆ ಕೆಲವು ವಿರೋಧ ಪಕ್ಷದ ನಾಯಕರು ಹೇಳಿಕೆ ನೀಡಿದ್ದಾರೆ. ಅನಗತ್ಯವಾಗಿ ಹೇಳಿಕೆ ಕೊಡುವ ಮೂಲಕ ನಮ್ಮಲ್ಲಿ ಈಗ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.   ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಪ್ರಬಲ ನಾಯಕರಾಗಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರವಾಗಿ ನಾವು ಚರ್ಚಿಸಿದ್ದೆವು. ಉತ್ತರ ಕರ್ನಾಟಕದಿಂದ ಆಯ್ಕೆಯಾಗುವ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಬಾದಾಮಿಯಲ್ಲಿ ಅವರು ಸ್ಪರ್ಧಿಸಿದರು ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಇತ್ತೀಚಿನ ಸುದ್ದಿ