ಮಂಗಳೂರು: ಸ್ಫೋಟದಲ್ಲಿ ಗಾಯಗೊಂಡಿರುವ ಆಟೋ ಚಾಲಕ ಹಾರ್ಟ್ ಪೇಷೆಂಟ್: ಪುತ್ರಿಗೆ ಮದುವೆ ನಿಗದಿಯಾಗಿದೆ!
ಮಂಗಳೂರು: ಆಟೋದಲ್ಲಿ ಬಾಂಬ್ ಬ್ಲಾಸ್ಟ್ ಘಟನೆಯಲ್ಲಿ ಗಾಯಗೊಂಡಿರುವ ಆಟೋ ಚಾಲಕ ಹಾರ್ಟ್ ಪೇಷೆಂಟ್ ಅನ್ನೋದು ತಿಳಿದು ಬಂದಿದ್ದು, ಅವರ ಪುತ್ರಿಗೆ ಮದುವೆ ನಿಗದಿಯಾಗಿತ್ತು ಅನ್ನೋದು ಇದೀಗ ಗೊತ್ತಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಆಟೋ ಚಾಲಕ ಪುರುಷೋತ್ತಮ್ ಅವರ ಸಹೋದರ ನಾಗೇಶ್, ಸ್ಪೋಟ ನಡೆದ ನಂತರ ನನಗೆ ಸ್ಥಳೀಯರು ಕರೆ ಮಾಡಿದ್ರು. ನಾನು ಕೂಡಲೇ ಸ್ಥಳಕ್ಕೆ ಹೋದೆ. ಆಗ ಪರಿಸ್ಥಿತಿ ಚಿಂತಾಜನಕವಾಗಿತ್ತು ಎಂದು ತಿಳಿಸಿದ್ದಾರೆ.
ಸ್ಫೋಟದಿಂದ ನನ್ನ ಸಹೋದರನ ಮೈಯೆಲ್ಲಾ ಸುಟ್ಟು ಹೋಗಿತ್ತು. ಪ್ಯಾಸೆಂಜರ್ ಕೂಡ ಸಂಪೂರ್ಣವಾಗಿ ಸುಟ್ಟು ಹೋಗಿದ್ದ. ಅವನು ಮಾತನಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕೂಡಲೇ ಐಸಿಯುಗೆ ಅವರನ್ನು ಶಿಫ್ಟ್ ಮಾಡಿದರು ಎಂದು ತಿಳಿಸಿದ್ದಾರೆ.
ನಂತರ ನಮಗೆ ನೋಡಲು ಬಿಡಲಿಲ್ಲ. ಸಹೋದರನಾದ ಆಟೋ ಚಾಲಕ ಹಾರ್ಟ್ ಪೇಷಂಟ್. ಅವರ ಮಗಳಿಗೆ ಕೂಡ ಮದುವೆ ನಿಶ್ಚಿತಾರ್ಥವಾಗಿದೆ. ಸರ್ಕಾರ ನಮಗೆ ಸಹಾಯ ಮಾಡಬೇಕು ಎಂದು ರಿಕ್ಷಾದಲ್ಲಿ ನಡೆದ ಸ್ಫೋಟದಲ್ಲಿ ಗಾಯಗೊಂಡ ಆಟೋ ಚಾಲಕ ಪುರುಷೋತ್ತಮ್ ಸಹೋದರ ನಾಗೇಶ್ ಹೇಳಿಕೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka