ಮಂಗಳೂರಿನಲ್ಲಿ ಸ್ಫೋಟ ಪ್ರಕರಣ: ತೀವ್ರಗೊಂಡ ತನಿಖೆ: ಆರೋಪಿಯ ಗುರುತು ಪತ್ತೆಗೆ ಕುಟುಂಬಸ್ಥರ ಆಗಮನ
ಮಂಗಳೂರು: ಆಟೋದಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಶಂಕಿತ ಆರೋಪಿ ಶಾರೀಕ್ ನ ಗುರುತು ಪತ್ತೆಗೆ ಕ್ರಮಕೈಗೊಂಡಿದ್ದಾರೆ. ಈಗಾಗಲೇ ಶಾರೀಕ್ ನ ಕುಟುಂಬಸ್ಥರು ಶಿವಮೊಗ್ಗದಿಂದ ಮಂಗಳೂರಿನ ಆಸ್ಪತ್ರೆಗೆ ಆಗಮಿಸಿದ್ದಾರೆ.
ಶಾರೀಕ್ ನ ಕುಟುಂಬದ ಮೂವರು ಮಹಿಳೆಯರು ಮಂಗಳೂರಿಗೆ ಆಗಮಿಸಿದ್ದಾರೆ. ಪ್ರಕರಣದ ತನಿಖಾಧಿಕಾರಿಯಾಗಿರುವ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಪರಮೇಶ್ವರ್ ಹೆಗಡೆ ಕೂಡ ಆಗಮಿಸಿದ್ದಾರೆ.
ಇನ್ನು ಶಂಕಿತ ಉಗ್ರ ಹಾಗೂ ಆಟೋ ಚಾಲಕ ಪುರುಷೋತ್ತಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಭೇಟಿ ನೀಡಿರುವ ಶಾರೀಕ್ ಕುಟುಂಬಸ್ಥರು ಗುರುತು ಪತ್ತೆ ಹಚ್ಚಲಿದ್ದಾರೆ.
ಮಂಗಳೂರಲ್ಲಿ ನಡೆದ ರಿಕ್ಷಾದಲ್ಲಿ ಕುಕ್ಕರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ವ್ಯಕ್ತಿ ಶಂಕಿತ ಎಂದು ನಾವು ಗುರುತಿಸಿದ್ದೇವೋ, ಆತನ ಮನೆಯವರನ್ನ ನಾವು ಕರೆದಿದ್ದೇವೆ. ಇದೀಗ ಅವರು ಆಸ್ಪತ್ರೆಗೆ ಬಂದಿದ್ದು ಕೆಲವೇ ನಿಮಿಷಗಳಲ್ಲಿ ಅವರು ಶಂಕಿತನನ್ನು ಪತ್ತೆ ಹಚ್ಚಲಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.
ಶಂಕಿತ ಶಾರೀಕ್ ನ ಮೈಸೂರಿನ ಮನೆಯಿಂದ ಪೊಲೀಸರು, ಮಿಕ್ಸರ್ ಗ್ರೈಂಡರ್, ಗ್ಯಾಸ್ ಸಿಲಿಂಡರ್ ಸೇರಿ ಸ್ಪೋಟಕ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೆಲ ಸ್ಪೋಟಕ ವಸ್ತುಗಳನ್ನು ಪುಡಿ ಮಾಡಲು ಮಿಕ್ಸರ್ ಗ್ರೈಂಡರ್ ಬಳಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಹಲವು ರೀತಿಯ ರಾಸಾಯನಿಕ ಪೌಡರ್ ಗಳು ಹಾಗೂ ಕಚ್ಚಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka