ಅಮಲು ಪದಾರ್ಥ ನೀಡಿ ದುರ್ಬಳಕೆ, ಬ್ಲ್ಯಾಕ್ ಮೇಲ್ ಮಾಡಿ ಹಿಂಸೆ ನೀಡುತ್ತಿದ್ದಾರೆ: ನಾಲ್ವರು ಯುವಕರ ವಿರುದ್ಧ ಯುವತಿ ದೂರು
ಚಿಕ್ಕಮಗಳೂರು: ಕಳೆದ ಮೂರು ವರ್ಷಗಳಿಂದ ನನ್ನನ್ನು ನಾಲ್ವರು ಬೆದರಿಸಿ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದು, ದೈಹಿಕವಾಗಿ ಬಳಸಿಕೊಂಡ ವಿಡಿಯೋವನ್ನು ಹರಿಯ ಬಿಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹರಿಹರಪುರ ಪೊಲೀಸ್ ಠಾಣೆಗೆ ಯುವತಿಯೊಬ್ಬಳು ದೂರು ನೀಡಿದ್ದಾಳೆ.
ಕೊಪ್ಪ ಮೂಲದ ಮಹಮ್ಮದ್ ರೌಫ್ , ಇರ್ಫಾನ್ , ಸೈಫ್ ಸೇರಿದಂತೆ ನಾಲ್ಕು ಜನರ ಮೇಲೆ ಯುವತಿ ದೂರು ದಾಖಲಿಸಿದ್ದಾಳೆ. ವಿದೇಶದಲ್ಲಿ ಕುಳಿತು ಯುವತಿಯ ಪೋಟೋವನ್ನು ರೌಫ್ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದಾನೆ.
ಇನ್ ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದ ರೌಫ್, ಸ್ನೇಹಿತರಾಗೋಣ ಎಂದಿದ್ದ. ನಂತರ ಕಾಲೇಜಿಗೆ ಬಂದು ಭೇಟಿ ಮಾಡಿದ್ದ. ಕೆಲವು ದಿನಗಳ ನಂತರ ಆತನ ಸ್ನೇಹಿತರೊಂದಿಗೆ ಆಗಮಿಸಿದ್ದ ಊಟ ಮಾಡೋಣ ಎಂದು ಕರೆದು ಜ್ಯೂಸ್ ನೀಡಿದ್ದಾನೆ. ಆನಂತರ ನನಗೆ ಏನಾಯ್ತು ಅನ್ನೋದು ಗೊತ್ತಿಲ್ಲ. ನನ್ನನ್ನು ಹಾಸ್ಟೆಲ್ ನ ಸಮೀಪ ಬಿಟ್ಟು ಹೋಗಿದ್ದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಆ ಬಳಿಕ ನನ್ನನ್ನು ಹಾಸ್ಟೆಲ್ ನಿಂದ ಹೊರ ಬರುವಂತೆ ರೌಫ್ ಒತ್ತಾಯಿಸಲು ಆರಂಭಿಸಿದ್ದು, ಬಾರದಿದ್ದರೆ ಎಡಿಟ್ ಮಾಡಿದ ಖಾಸಗಿ ಫೋಟೋವನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದ. ಆತನ ಬೆದರಿಕೆಗೆ ನಾನು ಹೋಗಬೇಕಾಯಿತು. ಪ್ರತಿ ಬಾರಿಯೂ ನನಗೆ ಅಮಲು ಪದಾರ್ಥ ಹಾಕಿ ಜ್ಯೂಸ್ ಕೊಡುತ್ತಿದ್ದರು. ಒಪ್ಪದೇ ಇದ್ದಾಗ ಚಾಕು ತೋರಿಸಿ ಒತ್ತಾಯವಾಗಿ ಕುಡಿಸುತ್ತಿದ್ದರು ಎಂದು ದೂರಿದ್ದಾಳೆ.
ನನಗೆ ತಿಳಿಯದ ಹಾಗೆ ತಾಳಿ ಕಟ್ಟುವ ಫೋಟೋವನ್ನೂ ಸಹ ತೆಗೆದಿದ್ದಾರೆ. ನನ್ನನ್ನು ದೈಹಿಕವಾಗಿ ಬಳಸಿಕೊಂಡ ವಿಡಿಯೋ ಹರಿಯಬಿಡುವುದಾಗಿ ಬೆದರಿಸಿದ್ದಾರೆ. ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಈ ಬಗ್ಗೆ ದೂರು ನೀಡಿದಾಗ ಠಾಣಾಧಿಕಾರಿ ನಾಸೀಸ್ ಹುಸೇನ್ ಎಂಬವರು ಪ್ರಕರಣ ದಾಖಲಿಸದೇ ಹಿಂಬರಹ ನೀಡಿ ಕಳುಹಿಸಿದರು. 20 ದಿನಗಳಾದರೂ ರೌಫ್ ಫೋಟೋವನ್ನು ಡಿಲೀಟ್ ಮಾಡಿಲ್ಲ, ಇನ್ನೂ ಹೆಚ್ಚಿನ ಫೋಟೋ ಅಪ್ ಲೋಡ್ ಮಾಡಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಯುವತಿ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾಳೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka