ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧ ಮಂಗಳೂರಿನಲ್ಲಿ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿ - Mahanayaka

ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧ ಮಂಗಳೂರಿನಲ್ಲಿ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿ

araga jnanendra press meet
23/11/2022

ಮಂಗಳೂರು: ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧ ಡಿಜಿಪಿ ಜೊತೆ ಮಂಗಳೂರು ವಿಸಿಟ್ ಮಾಡಿದ್ದೇನೆ. ಆರೋಪಿಯ ಹಿನ್ನೆಲೆ, ಫಂಡಿಂಗ್ ಹಾಗೂ ಯಾರು ಬೆನ್ನ ಹಿಂದೆ ಇದ್ದಾರೆ ಅಂತ ತನಿಖೆ ಮಾಡಲಾಗ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಮಂಗಳೂರು ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಆಟೋ ಚಾಲಕನ ಜೊತೆ ಆಸ್ಪತ್ರೆಗೆ ತೆರಳಿ ಮಾತನಾಡಿದ್ದೇನೆ. ಶಾರೀಕ್ ತೀರ್ಥಹಳ್ಳಿಯವನಾಗಿದ್ದು, ಬೆಂಗಳೂರು, ಕನ್ಯಾಕುಮಾರಿ ಸೇರಿ ಹಲವಡೆ ಸುತ್ತಾಡಿದ್ದಾನೆ. ಈ ಸಂಬಂಧ ಪೊಲೀಸರು ಅನೇಕ ಸಾಕ್ಷ್ಯ ಕಲೆ ಹಾಕಿದ್ದಾರೆ ಎಂದರು.

ಫಾರೆನ್ಸಿಕ್ ತಜ್ಞರು ಕೂಡ ಅನೇಕ ದಾಖಲೆ ಕಲೆ ಹಾಕಿದ್ದಾರೆ. ಇವನ ಹಿನ್ನೆಲೆ, ಫಂಡಿಂಗ್ ಹಾಗೂ ಯಾರು ಬೆನ್ನ ಹಿಂದೆ ಇದ್ದಾರೆ ಅಂತ ತನಿಖೆ ಮಾಡಲಾಗ್ತಿದೆ. ಇವನಿಗೆ ಶಿಕ್ಷೆ ಆಗೋ ನಿಟ್ಟಿನಲ್ಲಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಲಾಗಿದೆ. ಸುಮಾರು ಎಂಟು ಜನ ತಜ್ಞ ವೈದ್ಯರು ಇಬ್ಬರಿಗೂ ಚಿಕಿತ್ಸೆ ‌ಕೊಡ್ತಾ ಇದ್ದಾರೆ. ಅವನು ಮಾತನಾಡಲು ಸಾಧ್ಯ ಆದ ಮೇಲೆ ಮತ್ತಷ್ಟು ಮಾಹಿತಿ ಸಿಗುತ್ತೆ ಎಂದು ಅವರು ಹೇಳಿದರು.

ಆಟೋ ಡ್ರೈವರ್ ನ ಚಿಕಿತ್ಸಾ ವೆಚ್ಚವನ್ನ ಸರ್ಕಾರವೇ ಭರಿಸುತ್ತೆ. ಕುಟುಂಬಕ್ಕೆ ಆರ್ಥಿಕ ಸಹಾಯದ ಬಗ್ಗೆ ಸಿಎಂ ಜೊತೆ ಮಾತನಾಡ್ತೇನೆ ಎಂದರು.




ಸ್ಥಳೀಯವಾಗಿ ಸಿಗೋ ವಸ್ತು ಜೋಡಿಸಿ ಬಾಂಬ್ ತಯಾರಿಸೋದ್ರಲ್ಲಿ ಅವರು ಪರಿಣಿತರು. ಇದನ್ನ ಎಲ್ಲಾ ಆಯಾಮದಿಂದ ಪೊಲೀಸರು ತನಿಖೆ ಮಾಡ್ತಾರೆ. ರಕ್ತ ಹರಿಸಿ ಪ್ರಾಣ ತೆಗೆಯಲು ಹೊರಟಿರೋ ಮತಾಂಧ ಶಕ್ತಿಗಳನ್ನ ನಾವು ತಡೆಗಟ್ಟುತ್ತೇವೆ. ಕೇಂದ್ರದ ತನಿಖಾ ಸಂಸ್ಥೆಗಳು ಕೂಡ ನಮ್ಮ ಜೊತೆಗೆ ಇದ್ದಾರೆ. ಇದರ ಹಿಂದೆ ಇರೋ ಎಲ್ಲಾ ಶಕ್ತಿಗಳನ್ನ ನಾವು ಬಂಧಿಸ್ತೇವೆ ಎಂದರು.

ಮಂಗಳೂರಿನಲ್ಲಿ ಎನ್.ಐ.ಎ ಕಚೇರಿ ಸ್ಥಾಪನೆ ಬಗ್ಗೆ ಹೇಳಿದ್ದೇವೆ. ಕೇಂದ್ರ ಸರ್ಕಾರ ಕೂಡ ಇದರ ಪಾಸಿಟಿವ್ ಒಪಿನಿಯನ್ ಇದೆ.  ಈ ಪ್ರಕರಣ ಎನ್.ಐ.ಎಗೆ ವಹಿಸೋ ಬಗ್ಗೆ ಒಂದೆರೆಡು ದಿನಗಳಲ್ಲಿ ನಿರ್ಧಾರ ಮಾಡ್ತೇವೆ. ತೀರ್ಥಹಳ್ಳಿ ಒಂದು ಸುಸಂಸ್ಕೃತ ತಾಲೂಕು, ಆದರೆ ಇಂಥವರೂ ಇದಾರೆ. ಈ ಯುವಕರಿಗೆ ‌ಮತಾಂಧ ಸಂಘಟನೆ ಲಿಂಕ್ ಇದೆ ಎಂದರು.

ಕರಾವಳಿ ಮತ್ತು ಕೇರಳದ ಲಿಂಕ್ ಇದೆ. ಮಧುರೈ, ನಾಗರಕೋಯಿಲ್, ತಮಿಳುನಾಡು ಎಲ್ಲಾ ಕಡೆ ಹೋಗಿದ್ದಾನೆ. ಇವರು ಫೋನ್ ನಲ್ಲಿ ಮಾತನಾಡಲ್ಲ, ಬೇರೆ ತರದ ಸಂಪರ್ಕ ಸಾಧಿಸ್ತಾರೆ. ಹಿಂದೂ ಹೆಸರಿನಲ್ಲಿ, ಹಿಂದೂ ಐಡಿ ಕಾರ್ಡ್ ನಕಲಿ ಮಾಡಿ ಓಡಾಡ್ತಾ ಇದ್ದ. ಇದರಿಂದ ಅವನ ಬಗ್ಗೆ ಅನುಮಾನ ಬರ್ತಾ ಇರಲಿಲ್ಲ. ಗೋಡೆ ಬರಹ ಕೇಸ್ ನಲ್ಲಿ ಹೈ ಕೋರ್ಟ್ ಎಂಟು ತಿಂಗಳಲ್ಲಿ ಬೇಲ್ ಕೊಟ್ಟಿದೆ. ಆ ಮೇಲೆ ತೀರ್ಥಹಳ್ಳಿಯ ಅಂಗಡಿಯಲ್ಲಿ ಕೆಲಸ ಮಾಡ್ತಾ ಇದ್ದವನು ನಾಪತ್ತೆಯಾದ. ಅವನು ಹೊರ ರಾಜ್ಯದಲ್ಲಿ ಆಗಾಗ್ಗೆ ಜಾಗ ಬದಲಿಸೋ ಕೆಲಸ ಮಾಡ್ತಾ ಇದ್ದ. ಅವನ ಬಗ್ಗೆ ಆಳವಾಗಿ ಮತ್ತು ಗಂಭೀರವಾಗಿ ತನಿಖೆ ಮಾಡ್ತಾ ಇದೀವಿ ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ