ವಾಹನಕ್ಕೆ ಸೈಡ್ ಕೊಡುವ ಭರದಲ್ಲಿ 50 ಅಡಿ ಆಳದ ಕಂದಕಕ್ಕೆ ಉರುಳಿದ ಆಟೋ
ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ಚಿಬಿದ್ರೆ ಗ್ರಾಮದ ಕಾಪು ಚಡಾವು ಎಂಬಲ್ಲಿ ರಸ್ತೆಯಿಂದ ಮೃತ್ಯುಂಜಯ ನದಿಬದಿಯ ಕಂದಕಕ್ಕೆ ರಿಕ್ಷಾ ಉರುಳಿ ಬಿದ್ದು ನಾಲ್ವರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಉಜಿರೆ ಕಡೆಯಿಂದ ಶಿವಮೊಗ್ಗದತ್ತ ಸಾಗುತ್ತಿದ್ದ ಆಟೋರಿಕ್ಷಾ ಕಾಪು ಎಂಬಲ್ಲಿ ಸಾಗುತ್ತಿದ್ದಾಗ ಮುಂದಿನಿಂದ ಬಂದ ವಾಹನಕ್ಕೆ ಸೈಡ್ ಕೊಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಹಾಗೂ ನದಿ ಮಧ್ಯದ ಸುಮಾರು 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಈ ಸಮಯ ನದಿಯಿಂದ ಸುಮಾರು ಒಂದು ಮೀ. ಅಂತರದಲ್ಲಿ ರಿಕ್ಷಾ ಮರ ಒಂದಕ್ಕೆ ಸಿಲುಕಿಕೊಂಡ ಕಾರಣ ಸಂಭವನೀಯ ದುರಂತ ತಪ್ಪಿದೆ.
ನದಿಯು ಈ ಭಾಗದಲ್ಲಿ ಸುಮಾರು 10 ರಿಂದ 12 ಅಡಿಯಷ್ಟು ಆಳವಿದೆ. ಶಿವಮೊಗ್ಗ ಮೂಲದ ಗಾಯಾಳುಗಳಾದ ಶಾರದಮ್ಮ, ಭಾರತೀಯಮ್ಮ,ಗೀತಾ ಹಾಗೂ ರಮೇಶ್ ಎಂಬವರನ್ನು ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಆಟೋರಿಕ್ಷಾ ಉರುಳಿದ ಕಂದಕ ಪ್ರದೇಶದಲ್ಲಿ ಸಾಕಷ್ಟು ತ್ಯಾಜ್ಯ ತಂದು ಹಾಕಲಾಗಿದ್ದು, ಪರಿಸರದಲ್ಲಿ ಹರಡಿರುವ ದುರ್ವಾಸನೆ ಹಾಗೂ ತ್ಯಾಜ್ಯಗಳ ರಾಶಿ ನಡುವೆ ಗಾಯಾಳು ಪ್ರಯಾಣಿಕರನ್ನು ಸ್ಥಳೀಯರು ಹರಸಾಹಸ ಪಟ್ಟು ಮೇಲಕ್ಕೆತ್ತಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka