ಕನ್ನಡಕ್ಕೆ ಎಂತಹ ದಾಳಿಯನ್ನೂ ಎದುರಿಸಬಲ್ಲ, ಗೆಲ್ಲ ಬಲ್ಲ ಶಕ್ತಿ ಇದೆ: ಡಾ.ಶಿವಕುಮಾರ್
ಬೆಂಗಳೂರು: ಕನ್ನಡ ಭಾಷೆಯು ತನ್ನ ಮೇಲೆ ಎಂತಹ ದಾಳಿಗಳು ನಡೆದರೂ, ತನ್ನ ಅಸ್ತಿತ್ವವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಟ್ಟಿಲ್ಲ ಎಂದು ಅಕ್ಕ IAS ಅಕಾಡೆಮಿಯ ಮುಖ್ಯಸ್ಥರಾದ ಡಾ.ಶಿವಕುಮಾರ್ ಹೇಳಿದರು.
ಬೆಂಗಳೂರಿನ ಯಲಹಂಕದ ಬಿಷಪ್ ಕಾಟನ್ ಕಾಲೇಜಿನಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 2 ಸಾವಿರ ವರ್ಷಗಳ ಹಿಂದೆ ಸಂಸ್ಕೃತದೊಂದಿಗೆ ಸ್ಪರ್ಧಿಸಿದರೂ ಕನ್ನಡ ಸೋತಿಲ್ಲ, ವಿದೇಶಿ ದಾಳಿಗಳಾದಾಗ ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ. ಆದರೂ ಕನ್ನಡ ಅಸ್ತಿತ್ವ ಉಳಿಸಿಕೊಂಡಿದೆ ಎಂದರು.
ಕನ್ನಡಕ್ಕೆ ಎಂತಹ ಗ್ಲೋಬಲೈಸೇಷನ್ ಎದುರೂ ಎದ್ದು ನಿಲ್ಲುವ ಸಾಮರ್ಥ್ಯ ಇದೆ. ಯಾಕೆಂದ್ರೆ, ಅದರ ಇತಿಹಾಸ ಅಷ್ಟು ಚೆನ್ನಾಗಿದೆ. 2 ಸಾವಿರದ ಮುನ್ನೂರು ವರ್ಷಗಳ ಭವ್ಯ ಇತಿಹಾಸವಿದೆ. ಹಾಗಾಗಿ ಕನ್ನಡಕ್ಕೆ ಎಂತಹ ದಾಳಿಯನ್ನೂ ಎದುರಿಸಬಲ್ಲ, ಗೆಲ್ಲ ಬಲ ಶಕ್ತಿ ಇದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸ್ಯಾಮ್ ಮಾರ್ಟಿನ್ ಕ್ರಿಸ್ಟೋಫರ್, ಕನ್ನಡ ವಿಭಾಗದ ಮುಖ್ಯಸ್ಥರಾದ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka