800 ಕಿ.ಮೀ. ಕ್ರಮಿಸಿ ಶಬರಿಮಲೆಗೆ: ಇರುಮುಡಿ ಹೊತ್ತು ಕಾಲ್ನಡಿಗೆ ಆರಂಭಿಸಿದ ಭಕ್ತ - Mahanayaka

800 ಕಿ.ಮೀ. ಕ್ರಮಿಸಿ ಶಬರಿಮಲೆಗೆ: ಇರುಮುಡಿ ಹೊತ್ತು ಕಾಲ್ನಡಿಗೆ ಆರಂಭಿಸಿದ ಭಕ್ತ

shabarimale yathra
27/11/2022

ಬಣಕಲ್: ಬಣಕಲ್ ನಿಂದ ಶಬರಿಮಲೆಗೆ ಸುಭಾಷ್ ನಗರದ ಗೋಪಾಲಕೃಷ್ಣ ನಾಯರ್ ಎಂಬವವರು ಶನಿವಾರದಂದು ತಮ್ಮ ಸ್ವಗೃಹದಿಂದ ಪೂಜೆ ಮುಗಿಸಿ ಇರ್ಮುಡಿ ಕಟ್ಟಿ ಶಬರಿಮಲೆಗೆ ಪಾದಯಾತ್ರೆ ಮೂಲಕ ನಡಿಗೆ ಪಯಣಕ್ಕೆ ಚಾಲನೆ ನೀಡಿದರು.


Provided by

ಸುಮಾರು 800ಕಿ.ಮೀ ವ್ಯಾಪ್ತಿಯ ಶಬರಿಮಲೆ ಕ್ಷೇತ್ರಕ್ಕೆ 32 ವರ್ಷಗಳ ಕಾಲ ವಾಹನದಲ್ಲಿ ಹೋಗಿ ಬರುತ್ತಿದ್ದರು. ಈ ವರ್ಷ ಇವರು 33 ನೇ ವರ್ಷಕ್ಕೆ ನಡೆದು ಬರುವುದಾಗಿ ಹರಕೆ ಹೊತ್ತು ಭಕ್ತಿಯಿಂದ ಅಯ್ಯಪ್ಪ ಸ್ವಾಮಿಯ ಭಕ್ತನಾಗಿ ಗುರು ಸ್ವಾಮಿಗಾಗಿ  ಗೋಪಾಲಕೃಷ್ಣ ಅವರು ಒಬ್ಬಂಟಿಗನಾಗಿ ಪಾದಯಾತ್ರೆ ಬೆಳೆಸಿದ್ದಾರೆ. ಚಾರ್ಮಾಡಿ ಘಾಟ್ ಮೂಲಕ ಪಾದಯಾತ್ರೆ ಬೆಳೆಸುವ ಇವರು ಮುಂಡಾಜೆ,ಧರ್ಮಸ್ಥಳ, ಸುಬ್ರಹ್ಮಣ್ಯ ಮಾರ್ಗವಾಗಿ ಶ್ರೀಕ್ಷೇತ್ರಕ್ಕೆ ತೆರಳಲಿದ್ದಾರೆ.

ಶಬರಿಮಲೆ ಅಯ್ಯಪ್ಪ ಸ್ವಾಮಿಯ ಭಕ್ತ ಗೋಪಾಲಕೃಷ್ಣ ನಾಯರ್ ವೃತ್ತಿಯಲ್ಲಿ ವೆಲ್ಡರ್ ಆಗಿದ್ದು ಜೀವನದಲ್ಲಿ ಸ್ವಾಮಿಯ ಕೃಫೆಯಿಂದ ಕುಟುಂಬಕ್ಕೆ ಒಳಿತಾಗಿದೆ. 32 ವರುಷ ಶಬರಿಮಲೇ ಮೆಟ್ಟಿಲೇರಿದ್ದೇನೆ. ಈ ವರ್ಷ ಸ್ವಲ್ಪ ಕಠಿಣ ನಿರ್ಧಾರ ತೆಗೆದುಕೊಂಡು ದಿನ 35 ಕಿ.ಮೀ ಕ್ರಮಿಸುತ್ತೇನೆ. ನಂತರ ಸಿಗುವ ದೇವಸ್ಥಾನಗಳಲ್ಲಿ ತಂಗುತ್ತೇನೆ. ಸುಮಾರು 22 ದಿನಗಳ ಕಾಲ ಈ ಪಾದಯಾತ್ರೆ ಆಗಲಿದೆ. ಡಿಸೆಂಬರ್ ತಿಂಗಳ ಕೊನೆಯ ವಾರದೊಳಗೆ ತಲುಪಬಹುದೆಂಬ ನಿರೀಕ್ಷೆಯಲ್ಲಿದ್ದೇನೆ. ತಲೆಯಲ್ಲಿ ಇರ್ಮುಡಿ ಹೊತ್ತು ತನ್ನ ಪಾದಯಾತ್ರೆ ಮಾಡುತ್ತಿದ್ದೇನೆ. ಎಂದು  ಗೋಪಾಲಕೃಷ್ಣ ತಿಳಿಸಿದರು.


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by <
Provided by
Provided by
Provided by
Provided by

ಪಾದಯಾತ್ರಿಕ ಗೋಪಾಲಕೃಷ್ಣ ಅವರಿಗೆ ಬಿ.ವಿ. ಸುರೇಶ್ ,ರವಿ ಪೂಜಾರಿ, ಸಂತೋಷ್, ಪ್ರಕಾಶ್, ಸಂದೀಪ್, ಜಗದೀಶ್, ರತನ್, ಗಣೇಶ್, ಕಾರ್ತಿಕ್, ಕಿರಣ್ ಮತ್ತಿತರರು ಬೀಳ್ಕೊಟ್ಟರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ