ಬಿಜೆಪಿಗರು ಗೋವುಗಳಿಗೆ ಮುತ್ತುಕೊಟ್ಟು ಫೋಟೋಗೆ ಫೋಸ್ ನೀಡುವಷ್ಟು ಗೋಶಾಲೆಗಳನ್ನು ತೆರೆದಿಲ್ಲ: ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಈ ಬಿಜೆಪಿಗರು ಗೋವುಗಳನ್ನು ಕಂಡರೆ ಮುತ್ತು ಕೊಟ್ಟು ಫೋಟೋಗೆ ಫೋಸ್ ನೀಡುವಷ್ಟು ಗೋಶಾಲೆಗಳನ್ನು ತೆರೆದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
5 ಸಾವಿರ ಕೋಟಿ ಭರಿಸಲು ಸರ್ಕಾರಕ್ಕೆ ಆಗುವುದಿಲ್ಲ ಎಂದು ಬಿಜೆಪಿಯವರಿಗೆ ಅರಿವಾದಾಗ ಗೋವುಗಳನ್ನು ದತ್ತು ನೀಡುವ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದರು. ಇದರ ಪ್ರಕಾರ ರಾಜ್ಯದ ಜನ ಗೋಶಾಲೆಗಳ ಹಸುಗಳ ದತ್ತು ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಸರ್ಕಾರ ಇದುವರೆಗೂ ಸರ್ಕಾರದ ಪ್ರಕಾರ 6 ಗೋಶಾಲೆ ಆರಂಭ ಮಾಡಿದ್ದು, ನನ್ನ ಪ್ರಕಾರ ಕೇವಲ ಮೂರು ಗೋಶಾಲೆಗಳನ್ನು ತೆರೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಗೋವುಗಳ ಬಗ್ಗೆ ಸದಾ ಉದ್ದುದ್ದು ಭಾಷಣ ಮಾಡುವವರ ಬಿಜೆಪಿಗರ ಸಾಧನೆ ಇಲ್ಲಿದೆ ನೋಡಿ ಎಂದು ಹೇಳಿರುವ ಅವರು ಈ ಕೆಳಗಿನ ಪಟ್ಟಿ ನೀಡಿದ್ದಾರೆ.
- ಮಂತ್ರಿಗಳ ಕ್ಷೇತ್ರದಲ್ಲಿ 9 ಗೋಶಾಲೆಯಲ್ಲಿ 306 ಜಾನುವಾರಗಳಿದ್ದು 10 ಗೋವುಗಳನ್ನು ಮಾತ್ರ ದತ್ತು ಪಡೆದಿದ್ದಾರೆ.
- ಚಿಕ್ಕಬಳ್ಳಾಪುರದಲ್ಲಿ 2 ಗೋಶಾಲೆ 4 ಜಾನುವಾರಗಳು ಮಾತ್ರ ಇವೆ.
- ಧಾರವಾಡದಲ್ಲಿ 5 ಗೋಶಾಲೆಗಳಲ್ಲಿ 20 ಜಾನುವಾರಗಳಿದ್ದು 3 ಗೋವುಗಳನ್ನು ಮಾತ್ರ ದತ್ತು ಪಡೆದಿದ್ದಾರೆ.
- ಹಾವೇರಿಯಲ್ಲಿ 2 ಗೋಶಾಲೆಗಳಲ್ಲಿ 108 ಜಾನುವಾರಗಳಿದ್ದು 4 ಗೋವುಗಳನ್ನು ಮಾತ್ರ ದತ್ತು ಪಡೆದಿದ್ದಾರೆ.
- ಉತ್ತರ ಕನ್ನಡದಲ್ಲಿ 6 ಗೋಶಾಲೆಗಳಲ್ಲಿ 594 ಜಾನುವಾರಗಳಲ್ಲಿ 6 ಗೋವುಗಳನ್ನು ಮಾತ್ರ ದತ್ತು ಪಡೆದಿದ್ದಾರೆ.
ಈಗ ಮುಖ್ಯಮಂತ್ರಿಗಳಿಗೆ ಗಡವು ನೀಡುವ ಸಂಘಟನೆಗಳು ಎಲ್ಲಿ ಹೋಗಿವೆ?, ಜವಾಬ್ದಾರಿ ನಿಭಾಯಿಸುವಾಗ ಓಡಿ ಹೋಗುವುದು ಏಕೆ?, ಬಿಜೆಪಿ ಶಾಸಕರು ಮಂತ್ರಿಗಳು ಎಲ್ಲಿ ಹೋದರು?, RSS ನವರು ಗೋಮಾತೆ ಮೇಲೆ ಪ್ರೀತಿ ತೋರುವವರು ಈಗ ಎಲ್ಲಿ ಹೋದರು?, ನಮ್ಮ ರಾಜ್ಯದಲ್ಲಿ 177 ಗೋಶಾಲೆಯಲ್ಲಿ 21,207 ಜಾನುವಾರು ಪೈಕಿ ದತ್ತು ಪಡೆಯಲಾದ ಜಾನುವಾರುಗಳು ಕೇವಲ 151 ಜಾನುವಾರು ಮಾತ್ರ. ಇದು ಬಿಜೆಪಿ ನಾಯಕರ ಯೋಗ್ಯತೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka