ಕೇರಳ ಸೇರಿದಂತೆ ಜಗತ್ತಿನಾದ್ಯಂತ ಕಮ್ಯುನಿಸಂ ಕಸದ ಬುಟ್ಟಿ ಸೇರಲಿದೆ: ತೇಜಸ್ವಿ ಸೂರ್ಯ
ಕಣ್ಣೂರು: ಕೇರಳ ಸೇರಿದಂತೆ ಎಲ್ಲೆಡೆ ಕಮ್ಯುನಿಸಂ ಮತ್ತು ಕಮ್ಯುನಿಸ್ಟ್ ಪಕ್ಷಗಳು ಇತಿಹಾಸದ ಕಸದ ಬುಟ್ಟಿ ಸೇರಲಿವೆ ಎಂದು ಸಂಸದ ಮತ್ತು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕೇರಳದ ಕಣ್ಣೂರಿನಲ್ಲಿ ಮಾತನಾಡಿದ ಅವರು, ಇಡೀ ಜಗತ್ತು ಕಮ್ಯುನಿಸಂ ಅನ್ನು ತಿರಸ್ಕರಿಸಿದೆ. ಒಂದು ಕಾಲದಲ್ಲಿ ಕಮ್ಯುನಿಸಂನ ಗಂಗೋತ್ರಿಯಾಗಿದ್ದ ಚೀನಾದಲ್ಲೂ ಈಗ ಅದನ್ನು ತಿರಸ್ಕರಿಸಲಾಗಿದೆ. ಅದೊಂದು ಅಪ್ರಾಯೋಗಿಕ ಮತ್ತು ವಿಫಲ ಸಿದ್ಧಾಂತವಾಗಿದೆ ಎಂದರು.
ಕೇರಳದ ಯುವ ಸಮುದಾಯ ಬದಲಾವಣೆಗೆ ತೋರುತ್ತಿರುವ ಆಸಕ್ತಿ, ಶಕ್ತಿಯನ್ನು ಗಮನಿಸಿದರೆ, ಕೇರಳದಲ್ಲಿ ಅತ್ಯಂತ ಶೀಘ್ರ ಕಮ್ಯುನಿಸಂ ಮತ್ತು ಕಮ್ಯುನಿಸ್ಟ್ ಪಕ್ಷಗಳು ಇತಿಹಾಸದ ಕಸದ ಬುಟ್ಟಿಗೆ ಸೇರಲಿವೆ ಎಂದು ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka