ಬೆಳ್ತಂಗಡಿ: ಯಕ್ಷಗಾನದ ಬ್ಯಾನರ್ ಹರಿದವರಿಂದ ತಪ್ಪೊಪ್ಪಿಗೆ!
ಬೆಳ್ತಂಗಡಿ: ಮರೋಡಿಯಲ್ಲಿ ನಡೆದ ಶ್ರೀ ಆದಿ ಧೂಮಾವತಿ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಮೇಳದ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ ಶುಭಕೋರಿ ಹಾಕಲಾಗಿದ್ದ ಬ್ಯಾನರ್ ಹರಿದ ಪ್ರಕರಣವು ಭಾನುವಾರ ಸುಖಾಂತ್ಯಗೊಂಡಿದೆ.
ಶುಕ್ರವಾರ ರಾತ್ರಿ ಬ್ಯಾನರನ್ನು ಯಾರೋ ಹರಿದು ಹಾಕಿದ್ದು, ಕೆಲವು ಬ್ಯಾನರ್ ನ್ನು ಕೊಂಡುಹೋಗಿರುತ್ತಾರೆ. ಇದೊಂದು ಯಕ್ಷಗಾನ ವಿರೋಧಿ ಕಿಡಿಗೇಡಿಗಳ ಕೃತ್ಯ ಎಂದು ಮನನೊಂದ ಭಕ್ತರು ಹಾಗೂ ಯಕ್ಷಗಾನ ಆಯೋಜಕರು ಗೆಜ್ಜೆಗಿರಿ ಕ್ಷೇತ್ರದ ಹಾಗೂ ಪೊಸರಡ್ಕ ಕ್ಷೇತ್ರದ ದೈವಗಳ ಮೊರೆ ಹೋಗಿ ತಪ್ಪು ಮಾಡಿದವರು ಯಾರೇ ಆಗಲಿ, ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮಾಪಣೆ ಕೇಳುವಂತಾಗಬೇಕು ಎಂದು ಪ್ರಾರ್ಥನೆ ಸಲ್ಲಿಸಿದ್ದರು.
ಪ್ರಾರ್ಥನೆ ಸಲ್ಲಿಸಿದ 24 ಗಂಟೆಯ ಒಳಗೆ ಮರೋಡಿಯ 3 ಮಕ್ಕಳು ತಾವು ಈ ಕೆಲಸ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದು, ಮಕ್ಕಳು ಮಾಡಿದ ಕೃತ್ಯವನ್ನು ಮನ್ನಿಸಬೇಕೆಂದು ಪೋಷಕರು ಕೇಳಿಕೊಂಡ ಹಿನ್ನೆಲೆಯಲ್ಲಿ ಈ ವಿಷಯವನ್ನು ಇಲ್ಲಿಗೆ ಮುಕ್ತಾಯ ಗೊಳಿಸುವುದಾಗಿ ಯಕ್ಷಗಾನ ಆಯೋಜಕರು ತಿಳಿಸಿರುತ್ತಾರೆ.
ತಪ್ಪಿತಸ್ಥರು 24 ಗಂಟೆಯ ಒಳಗೆ ತಮ್ಮ ತಪ್ಪನ್ನು ಒಪ್ಪಿಕೊಂಡದ್ದರಿಂದ ಇದು ಗೆಜ್ಜೆಗಿರಿ ಕ್ಷೇತ್ರದ ಮಹಿಮೆ ಮತ್ತು ಪೊಸರಡ್ಕ ಕ್ಷೇತ್ರದ ದೈವಗಳ ಕಾರ್ಣಿಕ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka