ಮಗನನ್ನು ಸುಪಾರಿ ನೀಡಿ ಹತ್ಯೆ ಮಾಡಿದ ಉದ್ಯಮಿ! - Mahanayaka
7:32 AM Thursday 12 - December 2024

ಮಗನನ್ನು ಸುಪಾರಿ ನೀಡಿ ಹತ್ಯೆ ಮಾಡಿದ ಉದ್ಯಮಿ!

crime news
05/12/2022

ಹುಬ್ಬಳ್ಳಿಯ ಖ್ಯಾತ ಉದ್ಯಮಿಯೊಬ್ಬರ ಮಗನ ನಾಪತ್ತೆ ಪ್ರಕರಣಕ್ಕೆ ಸ್ಪೋಟಕ ತಿರುವು ಲಭ್ಯವಾಗಿದ್ದು, ಮಗನನ್ನು ತಂದೆಯೇ ಸುಪಾರಿ ನೀಡಿ ಹತ್ಯೆ ಮಾಡಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.

ಪುತ್ರ ಅಖಿಲ್ ಜೈನ್(30) ನಾಪತ್ತೆಯಾಗಿದ್ದಾನೆ ಎಂದು ಉದ್ಯಮಿ ಭರತ್ ಜೈನ್ ಡಿ.3ರಂದು ದೂರು ನೀಡಿದ್ದ. ಆದರೆ ಪೊಲೀಸರಿಗೆ ತಂದೆಯ ವರ್ತನೆ ಅನುಮಾನ ಮೂಡಿಸಿತ್ತು. ಹೀಗಾಗಿ ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ ಮಗನ ಉಪಟಳ ತಾಳಲಾರದೇ ಸುಪಾರಿ ನೀಡಿ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಅಖಿಲ್ ಜೈನ್ ನ ಮೃತದೇಹ ತೋಟದ ಮನೆಯಲ್ಲಿ ಪತ್ತೆಯಾಗಿತ್ತು. ಸ್ಥಳೀಯ ಹಂತಕರಿಗೆ ಸುಪಾರಿ ನೀಡಿ ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆ ನಡೆಸಿದ್ದ. ಇದೀಗ ಆರೋಪಿ ತಂದೆಯ ಹೇಳಿಕೆ ಆಧರಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೇಶ್ವಾಪುರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ಹಂಚಿನಾಳೆ ನೇತೃತ್ವದ ತಂಡ ಪ್ರಕರಣ ದಾಖಲಾಗಿ 48 ಗಂಟೆಯೊಳಗೆ  ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ