ಚಪ್ಪಲಿ ಧರಿಸಿ ದೈವದ ದೀವಟಿಕೆ ಹಿಡಿದ ಸಂಸದ ತೇಜಸ್ವಿ ಸೂರ್ಯ: ವ್ಯಾಪಕ ಆಕ್ರೋಶ!

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ತುಳುನಾಡಿನ ದೈವಕ್ಕೆ ಅಪಚಾರ ಎಸಗಿರುವ ಆರೋಪ ಕೇಳಿ ಬಂದಿದ್ದು, ಚಪ್ಪಲಿ ಧರಿಸಿ ದೈವದ ದೀವಟಿಕೆ ಹಿಡಿದು ಫೋಟೋಗೆ ಪೋಸ್ ನೀಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವರದಿಗಳ ಪ್ರಕಾರ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೋತ್ಥಾನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೈವಾರಾಧನೆಯ ಕಾರ್ಯಕ್ರಮವಿದ್ದು, ಇದರಲ್ಲಿ ತೇಜಸ್ವಿ ಸೂರ್ಯ ಚಪ್ಪಲಿ ಧರಿಸಿ ದೈವದ ಕೈಗೆ ದೀವಟಿಕೆ ನೀಡುವ ಮೂಲಕ ದೈವಾರಾಧನೆಗೆ ಅವಮಾನಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಸದಾ ಸಂಸ್ಕೃತಿ ಎಂದೆಲ್ಲ ಹೇಳಿಕೆ ನೀಡುವ ತೇಜಸ್ವಿ ಸೂರ್ಯಗೆ ದೈವಕ್ಕೆ ದೀವಟಿಕೆ ನೀಡುವಾಗ ಚಪ್ಪಲಿ ಧರಿಸಿ ನೀಡಬಾರದು ಅನ್ನೋ ಕನಿಷ್ಠ ಜ್ಞಾನವಿಲ್ಲವೇ? ಅಥವಾ ಗೊತ್ತಿದ್ದೂ ಕೂಡ ಏನಾಗುತ್ತದೆ ಅನ್ನೋ ದರ್ಪದಿಂದ ಈ ರೀತಿ ಮಾಡಿದರೆ ಅನ್ನೋ ಆಕ್ರೋಶದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka