ಬೆಳ್ತಂಗಡಿಯಲ್ಲಿ ಹಲವು ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆ!
ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಪದಾಧಿಕಾರಿಗಳ ಸಭೆ ಎಸ್‌ಡಿಎಂ ಕಲಾಭವನ ಬೆಳ್ತಂಗಡಿಯಲ್ಲಿ ಮಂಗಳವಾರ ನಡೆದು ಬೇರೆ ಪಕ್ಷಗಳಿಂದ ಹಲವು ನಾಯಕರುಗಳು ಬಿಜೆಪಿ ಗೆ ಸೇರ್ಪಡೆಗೊಂಡರು.
ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ, ಯುವ ಕಾಂಗ್ರೆಸ್ ಮುಖಂಡರಾಗಿದ್ದ ಚಂದನ್ ಪ್ರಸಾದ್ ಕಾಮತ್, ಲಾಯಿಲ ಗ್ರಾ.ಪಂ ಮಾಜಿ ಅಧ್ಯಕ್ಷ, ತಾ.ಪಂ ಮಾಜಿ ಸದಸ್ಯ ಸುಧಾಕರ ಬಿ.ಎಲ್, ಮುಂಡಾಜೆ ಗ್ರಾ.ಪಂ ಮಾಜಿ ಸದಸ್ಯೆ ಅಶ್ವಿನಿ ಹೆಬ್ಬಾರ್, ವೇಣೂರಿನ ಸತೀಶ್ ಮಡಿವಾಳ, ಧರ್ಮಸ್ಥಳ ಗ್ರಾ.ಪಂ ಸದಸ್ಯೆ ಗಾಯತ್ರಿ, ಕುಕ್ಕಳದ ರಾಜೇಶ್ವರಿ, ಮಾಲಾಡಿ ಗ್ರಾ.ಪಂ ಸದಸ್ಯ ಪುನೀತ್ ಕುಮಾರ್, ಸಹಕಾರಿ ಧುರೀಣ ಪುಷ್ಪರಾಜ ಜೈನ್, ನಂದ ಭಟ್, ಸತೀಶ್ ರಾವ್ ನಿಡ್ಲೆ, ಮಹೇಶ್ ಜೈನ್ ಧರ್ಮಸ್ಥಳ, ಧರ್ಮಸ್ಥಳ ಗ್ರಾ.ಪಂ ಮಾಜಿ ಸದಸ್ಯ ಆಂಟೊನಿ ಕಲ್ಲೇರಿ, ಸೆಬಾಸ್ಟಿಯನ್, ಆರಂಬೋಡಿ ಗ್ರಾ.ಪಂ ಮಾಜಿ ಸದಸ್ಯ ಆನಂದ ಶೆಟ್ಟಿ, ಕಾಶಿಬೆಟ್ಟು ಶನೈಶ್ಚರ ದೇವಸ್ಥಾನದ ಮೊಕ್ತೇಸರ ಜನಾರ್ದನ ಆಚಾರ್ಯ, ಕುಕ್ಕಳದ ವಿಠಲ, ಮೊಗ್ರು ಗ್ರಾಮದ ಕೇಶವ, ಕಲ್ಮಂಜ ಗುತ್ತು ಮನೆಯ ಸುಂದರಿ, ಮೊದಲಾದ ನಾಯಕರು, ಚಂದನ್ ಪ್ರಸಾದ್ ಕಾಮತ್ ಅವರ ಜೊತೆ ಹಲವಾರು ಮಂದಿ ಅಭಿಮಾನಿಗಳು ಬಿಜೆಪಿಗೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಮುಖಂಡರುಗಳನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು. ಶಾಸಕ ಹರೀಶ್ ಪೂಂಜ ಹಾಗೂ ಇತರರು ಇದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka