ಪತ್ನಿಯ ಶವವನ್ನು ಮೂಟೆಯಲ್ಲಿ ಹೊತ್ತೊಯ್ದ ಪತಿ!! - Mahanayaka
2:06 AM Wednesday 11 - December 2024

ಪತ್ನಿಯ ಶವವನ್ನು ಮೂಟೆಯಲ್ಲಿ ಹೊತ್ತೊಯ್ದ ಪತಿ!!

chamarajanagara news
07/12/2022

ಚಾಮರಾಜನಗರ: ಬಡವರು ಇದ್ದರೂ ಸುಖವಿಲ್ಲ– ಸತ್ತರೂ ಸುಖವಿಲ್ಲ ಎಂಬುದಕ್ಕೆ ಈ ಬಡಕುಟುಂಬವೇ ಸಾಕ್ಷಿಯಾಗಿದ್ದು, ಪತ್ನಿ ಶವವನ್ನು ಸಾಗಿಸಲು ಹಣವಿಲ್ಲದೇ ಮೂಟೆಯಲ್ಲಿ ಹೊತ್ತೊಯ್ದಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.

ಮಂಡ್ಯ ಮೂಲದ ಕಾಳಮ್ಮ(26) ಎಂಬಾಕೆ ಮೃತಳಾಗಿದ್ದು ಪತಿ ರವಿ ಮೂಟೆಯಲ್ಲಿ ಶವ ಸಾಗಿಸುವಾಗ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ‌. ಯಳಂದೂರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಹತ್ತಿರ ಇರುವ ಆಲೆಮನೆ ಯಲ್ಲಿ ಳೆದ 15 ದಿನಗಳಿಂದ ರವಿ ಮತ್ತು ಆತನ ಹೆಂಡತಿ ಕಾಳಮ್ಮ ಉಳಿದಿಕೊಂಡು ಪ್ಲಾಸ್ಟಿಕ್, ಗುಜರಿ ಸಾಮಗ್ರಿಗಳನ್ನು  ಸಂಗ್ರಹಿಸಿ ಮಾರಾಟ ಮಾಡಿ  ಜೀವನ ಸಾಗಿಸುತ್ತಿದ್ದರು‌.

ಮಂಗಳವಾರ ರಾತ್ರಿ ಕಾಳಮ್ಮ  ಅತಿ ಹೆಚ್ಚು ಮದ್ಯಪಾನ ಮಾಡಿ ಸಾವನ್ನಪ್ಪಿದ್ದು ಪತ್ನಿ ಶವವನ್ನು  ರವಿ  ಹೆಗಲ ಮೇಲೆ ಹೊತ್ತುಕೊಂಡು ಪಟ್ಟಣದ ಸುವರ್ಣವತಿ ನದಿ  ಕಡೆ ಅಂತ್ಯ ಸಂಸ್ಕಾರ ಮಾಡಲು ಹೋಗುತ್ತಿದ್ದ ವೇಳೆ ಸಾರ್ವಜನಿಕರಿಂದ ಪೊಲೀಸರು ಮಾಹಿತಿ ಪಡೆದು  ಆತನಿಂದ ಹೇಳಿಕೆ ಪಡೆದು ಶವ ವನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ  ಶವ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದಾರೆ.

ಶವ ಪರೀಕ್ಷೆ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಿಎಸ್ ಐ  ತಿಳಿಸಿದ್ದಾರೆ. ಯಳಂದೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ