ಕೊರೊನಾ ವೈರಸ್ ರಾತ್ರಿ ಮಾತ್ರ ಹರಡುವುದೇ? | ಏನಿದು ನೈಟ್ ಕರ್ಫ್ಯೂ, ಇದರ ಪ್ರಯೋಜನ ಏನು? - Mahanayaka
1:12 AM Wednesday 11 - December 2024

ಕೊರೊನಾ ವೈರಸ್ ರಾತ್ರಿ ಮಾತ್ರ ಹರಡುವುದೇ? | ಏನಿದು ನೈಟ್ ಕರ್ಫ್ಯೂ, ಇದರ ಪ್ರಯೋಜನ ಏನು?

23/12/2020

ಬೆಂಗಳೂರು: ರಾಜ್ಯ ಸರ್ಕಾರ  ಇಂದು ರಾತ್ರಿ ಯಿಂದ ಕರ್ಫ್ಯೂ ಜಾರಿ ಮಾಡಿ ಘೋಷಣೆ ಮಾಡಿದೆ.  ಈ ನೈಟ್ ಕರ್ಫ್ಯೂ ನಿಂದ ಕೊರೊನಾ ನಿಯಂತ್ರಣ ಹೇಗೆ ಸಾಧ್ಯ ಎಂದು ಸರ್ಕಾರ ಜನರಿಗೆ ಸ್ಪಷ್ಟಪಡಿಸಿಲ್ಲ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ವಿಧಿಸುವುದರಿಂದ ಕೊರೊನಾ ವೈರಸ್ ನಿಯಂತ್ರಣವಾಗುತ್ತದೆಯೇ ಎಂದು ರಾಜ್ಯ ಸರ್ಕಾರ ಹೇಗೆ ಹೇಳುತ್ತಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸುಧಾಕರ್ ಅವರು,   ಎಲ್ಲರೂ ಮಲಗುವ ಸಂದರ್ಭದಲ್ಲಿ ನಾವು ಕರ್ಫ್ಯೂ ಮಾಡುತ್ತಿದ್ದೇವೆ. ಇದರಿಂದ ಯಾರಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ. ಕೆಎಸ್ಸಾರ್ಟಿಸಿ  ಬಸ್ ಸಂಚಾರಕ್ಕೆ  ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ . ಎಲ್ಲರೂ ಮಲಗುವ ಸಂದರ್ಭದಲ್ಲಿ ಕರ್ಫ್ಯೂ ಮಾಡುವ ಉದ್ದೇಶವೇನು? ಅದರಿಂದ ಕೊರೊನಾ ನಿಯಂತ್ರಣ ಹೇಗೆ ಸಾಧ್ಯ? ಎಂದು ರಾಜ್ಯ ಸರ್ಕಾರ ಜನತೆಗೆ ಮಾಹಿತಿ ನೀಡಿಲ್ಲ.

ಕ್ರಿಸ್ಮಸ್  ಗೆ 2ದಿನಗಳು ಬಾಕಿಯಿರುವ  ಮೊದಲು ರಾಜ್ಯ ಸರ್ಕಾರ ಈ ಕರ್ಫ್ಯೂ ಜಾರಿಗೆ ಮುಂದಾಗಿದೆ. ಹೊಸ ವರ್ಷಾಚರಣೆಗೂ  ಸರ್ಕಾರದ ಕರ್ಫ್ಯೂ ತೊಂದರೆಯಾಗಲಿದೆ.  ಎಲ್ಲರೂ ಮಲಗುವ ಸಮಯದಲ್ಲಿ ಕರ್ಫ್ಯೂ ಮಾಡುತ್ತೇವೆ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ ನಿಲುವುಗಳು ಹಾಸ್ಯಾಸ್ಪದವಾಗಿದೆ ಎನ್ನುವ ಅಭಿಪ್ರಾಯಗಳು ಕೇಳಲಿ ಬಂದಿವೆ.

ಜನರ ಆರೋಗ್ಯಕ್ಕೆ ಹಾನಿಯಾಗಲಿರುವ ಮದ್ಯಪಾನ, ಸಿಗರೇಟು ಅಂಗಡಿಗಳನ್ನು ಬಂದ್ ಮಾಡಿಸದ ಸರ್ಕಾರ. ರಾತ್ರಿ 10 ಗಂಟೆಯ ವರೆಗೆ ಎಲ್ಲವನ್ನು ತೆರೆದಿಟ್ಟು, ಆ ಬಳಿಕ ಕರ್ಫ್ಯೂ ಜಾರಿ ಮಾಡಲು ಹೊರಟಿದೆ. ನೈಟ್ ಕರ್ಫ್ಯೂನಿಂದು ಕೊರೊನಾ ವೈರಸ್ ಹೇಗೆ ನಿಯಂತ್ರಣವಾಗಲು ಸಾಧ್ಯ ಎಂದು ರಾಜ್ಯ ಸರ್ಕಾರ ತಿಳಿಸಬೇಕು ಎಂಬ ಮಾತುಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ