ತಂದೆಯ ಜೊತೆಗೆ ಸೇರಿ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ: ಬೆಚ್ಚಿಬೀಳಿಸುವ ಘಟನೆ!
ಉತ್ತರ ಕನ್ನಡ: ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ತಂದೆಯೊಂದಿಗೆ ಸೇರಿ ಮಗ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ನಡೆದಿದ್ದು, ಗಂಭೀರ ಹಲ್ಲೆಯಿಂದ ತೀವ್ರ ರಕ್ತಸ್ರಾವಗೊಂಡು ಮಹಿಳೆ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಡಿಸೆಂಬರ್ 6ರಂದು ರಾತ್ರಿ ಈ ಘಟನೆ ನಡೆದಿದ್ದು, ನಿವೃತ್ತ ಶಿಕ್ಷಣಾಧಿಕಾರಿಯಾಗಿದ್ದ ವಿಶ್ವೇಶ್ವರ್ ಭಟ್(69) ಮತ್ತು ಆತನ ಮಗ ಮಧುಕೇಶ್ವರ್ ಭಟ್(33) ಸೇರಿ ತಾಯಿ ಗೀತಾ ಭಟ್(64) ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ತಂದೆ ಮಗ ಇಬ್ಬರು ಜಗಳ ಆರಂಭಿಸಿದ್ದು, ಜಗಳ ಬಿಡಿಸಲು ಬಂದ ತಾಯಿಯ ತಲೆಗೆ ಕಟ್ಟಿಗೆ ಹಾಗೂ ಚೇರ್ ನಿಂದ ಹೊಡೆದಿದ್ದಾರೆ.. ಈ ವೇಳೆ ನೋವು ತಾಳಲಾರದೇ ಮಹಿಳೆ ಅಂಗಳಕ್ಕೆ ಬಂದಿದ್ದು, ಆಕೆಯ ಜೀವ ಉಳಿಸಲು ಕೂಡ ಇಬ್ಬರೂ ಪ್ರಯತ್ನ ಮಾಡದೇ ಕುತ್ತಿಗೆಗೆ ಬಟ್ಟೆ ಕಟ್ಟಿ ಅಂಗಳದಿಂದ ಮನೆಯೊಳಗೆ ಹೊತ್ತೊಯ್ದು ಅವರು ನಿತ್ಯ ಮಲಗುತ್ತಿದ್ದ ಸ್ಥಳದಲ್ಲಿ ಎಸೆದಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದಾರೆನ್ನಲಾಗಿದೆ.
ಬೆಳಗ್ಗೆ ಸ್ಥಳೀಯರು ಮನೆಯ ಅಂಗಳದಲ್ಲಿ ರಕ್ತ ಕಂಡು ಬಂದಿದ್ದರಿಂದ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ ವೇಳೆ ಹತ್ಯೆ ನಡೆಸಿರುವುದು ಸ್ಪಷ್ಟವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೆತ್ತ ತಾಯಿಯನ್ನು ಕೊಂದ ನೋವು ಮಗನಿಗೆ ಕಾಡಲಿಲ್ಲ, ಜೊತೆಗೆ ಸಂಸಾರ ಮಾಡಿದ ಮಡದಿಯನ್ನು ಕೊಲೆ ಮಾಡಿದ್ದು ಗಂಡನಿಗೆ ಕಾಡಲಿಲ್ಲ ಇವರೆಂತಹ ಮನುಷ್ಯರು ಅಂತ ಸಾರ್ವಜನಿಕರು ಹಿಡಿಶಾಪ ಹಾಕುತ್ತಿರುವುದು ಕಂಡು ಬಂತು.
ಗೀತಾ ಭಟ್ ಅವರ ಕಿರಿಯ ಮಗ ಡಿಪ್ಲೋಮಾ ಮುಗಿಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ತಂದೆ ಹಾಗೂ ಅಣ್ಣ ನಡೆಸಿದ ದುಷ್ಕೃತ್ಯದಿಂದ ಇದೀಗ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka