ಸಿಎಂ ಚಾಮರಾಜನಗರ ಭೇಟಿ ಚುನಾವಣೆ ಗಿಮಿಕ್ಸ್ ಆಗಬಾರದು: ವಕೀಲ ಪ್ರಸನ್ನಕುಮಾರ್ - Mahanayaka
8:14 PM Thursday 12 - December 2024

ಸಿಎಂ ಚಾಮರಾಜನಗರ ಭೇಟಿ ಚುನಾವಣೆ ಗಿಮಿಕ್ಸ್ ಆಗಬಾರದು: ವಕೀಲ ಪ್ರಸನ್ನಕುಮಾರ್

chamarajanagara
13/12/2022

  • ಸಚಿವ ವಿ.ಸೋಮಣ್ಣ ಪೊಲೀಸರನ್ನು ಬಳಸಿಕೊಂಡು ಆರ್.ಪಿ.ನಂಜುಂಡಸ್ವಾಮಿ ಬಂಧನ

ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜುಬೊಮ್ಮಾಯಿ ಅವರು ಚಾಮರಾಜನಗರಕ್ಕೆ ಬರುತ್ತಿರುವುದು ಸ್ವಾಗತಾರ್ಹ ಆದರೆ, ಇದೊಂದು ಚುನಾವಣೆ ಗಿಮಿಕ್ ಆಗದೇ ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ವಿಶೇಷ ಪ್ಯಾಕೇಜು ತೆಗೆದುಕೊಂಡು ಬರಬೇಕು ಎಂದು  ಮಹಾನಾಯಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ವಕೀಲರಾದ  ಬಿ.ಪ್ರಸನ್ನಕುಮಾರ್ ಒತ್ತಾಯಿಸಿದರು

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಅಭಿವೃದ್ದಿಗೋಸ್ಕರ ಮುಖ್ಯಮಂತ್ರಿಗಳು ಜಿಲ್ಲೆಗೆ ಬರುತ್ತಿಲ್ಲ. ಬದಲಾಗಿ  ಇನ್ನೇನು ಕೆಲವು ತಿಂಗಳಗಳಲ್ಲಿ ವಿಧಾನಸಭಾ ಚುನಾವಣೆ ಬರುತ್ತಿರುವುದರಿಂದ  ಎಲ್ಲಾ ಜಿಲ್ಲೆಗಳಿಗೆ ನಾಟಕೀಯವಾಗಿ ಭೇಟಿ ನೀಡುತ್ತಿದ್ದಾರೆ. ಜಿಲ್ಲೆಗೆ ನೀವು ಪ್ರಾಮಾಣಿಕವಾಗಿ ಬರುವುದಾದರೆ ಜಿಲ್ಲೆಯ ಅಭಿವೃದ್ದಿಗೆ ವಿಶೇಷವಾದ ಪ್ಯಾಕೇಜ್ ತೆಗೆದುಕೊಂಡು ಬರಬೇಕು. ಅದನ್ನು ಬಿಟ್ಟು ಜಿಲ್ಲೆಗೆ ಜನಸಂಪರ್ಕ ಮಾಡುವ ಉದ್ದೇಶವನ್ನಿಕೊಂಡು ಬಂದು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬೇಡಿ ಎಂದರು

ಬಸವರಾಜು ಬೊಮ್ಮಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಸುಳ್ವಾಡಿ ವಿಷಪ್ರಸಾದ ಪ್ರಕರಣದಲ್ಲಿ 18 ಹೆಚ್ಚು ಮಂದಿ ಮೃತಪಟ್ಟ ಕುಟುಂಬಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಿ ಸಾಂತ್ವಾನ ಹೇಳಲಿಲ್ಲ. ಪರಿಹಾರ ಸಿಕ್ಕಿದೆಯೋ ಇಲ್ಲವೋ ಎಂದು ಕೇಳಲಿಲ್ಲ. ಗುಂಡ್ಲುಪೇಟೆ ತಾಲೂಕಿನಲ್ಲಿ ಗಣಿಗಾರಿಕೆ ಕ್ವಾರೆ ಕುಸಿದು ಕಾರ್ಮಿಕರು ಸತ್ತರು ಆವಾಗಲೂ ಕೂಡ ಮುಖ್ಯಮಂತ್ರಿಗಳು ಬರಲಿಲ್ಲ. ಭಾರೀ ಮಳೆ, ಪ್ರವಾಹದಿಂದ ಜಿಲ್ಲೆಯಲ್ಲಿ ಅಪಾರ ಮನೆ, ಬೆಳೆ ನಷ್ಟ, ಜಾನುವಾರು, ಜನರು ಸತ್ತರು. ಅಂತಹ ಸಂದರ್ಭದಲ್ಲೂ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಲಿಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ದಿ ವಿಶೇಷ ಪ್ಯಾಕೇಜ್‌ ನ್ನು ಬಿಡುಗಡೆ ಮಾಡಲಿಲ್ಲ. ಚಾಮರಾಜನಗರ, ತಮಿಳುನಾಡು ರೈಲ್ವೆ ಯೋಜನೆ ಮಾಡಲು ಪ್ರಯತ್ನ ಮಾಡಲಿಲ್ಲ ಚಾಮರಾಜನಗರದಲ್ಲೂ ಕೂಡ ರಸ್ತೆ ಸರಿಯಾಗಿಲ್ಲ, ಒಳಚರಂಡಿ ಕಾಮಗಾರಿ ಪೂರ್ಣವಾಗಿಲ್ಲ. ರಿಂಗ್ ರಸ್ತೆ ಅಭಿವೃದ್ದಿಯಾಗಿಲ್ಲ. ಜೋಡಿರಸ್ತೆ ಅವೈಜ್ಞಾನಿಕವಾಗಿದ್ದು, ಮಳೆ ಬಂದರೆ ಜಲಾವೃತ್ತವಾಗಿ ಸಂಚಾರಕೆ ತುಂಬಾ ತೊಂದರೆ ಉಂಟಾಗುತ್ತದೆ ಇದನ್ನು ಸರಿಪಡಿಸಿಲ್ಲ ಒಟ್ಟಾರೆ ಜಿಲ್ಲೆ ಅಭಿವೃದ್ದಿಯಲ್ಲಿ ಕುಂಠಿತವಾಗಿದೆ ಎಂದರು.

ಸಚಿವ ವಿ.ಸೋಮಣ್ಣ ಅವರು ಪೊಲೀಸರು ಮತ್ತು ತಹಶೀಲ್ದಾರ್ ಅವರನ್ನು ಬಳಸಿಕೊಂಡು  ಇಂದು ಮುಖ್ಯಮಂತ್ರಿ ಚಾಮರಾಜನಗರ ಬರುತ್ತಿರುವ ಹಿನ್ನೆಲೆಯಲ್ಲಿ  ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ಅವರನ್ನು ಬಂಧನ ಮಾಡಿಸಿ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಕೀಲ ಪ್ರಸನ್ನಕುಮಾರ್ ಆರೋಪಿಸಿದರು.

ಪೋಲಿಸರು ನಂಜುಂಡಸ್ವಾಮಿ ಅವರನ್ನು ಭಾನುವಾರ ರಾತ್ರಿ ಬಂಧಿಸಿ ಸಂತೇಮರಹಳ್ಳಿ ಪ್ರವಾಸಿಮಂದಿರದಲ್ಲಿಟ್ಟುಕೊಂಡಿದ್ದಾರೆ. ಬಂಧನ ಪಡಿಸಿದ 24 ಗಂಟೆಗಳೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಿತ್ತು. ಅನಂತರ ಕಸ್ಟಡಿಯಲ್ಲಿ ಇಟ್ಟುಕೊಳ್ಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸಬೇಕಿತ್ತು. ಆದರೆ ಅಕ್ರಮವಾಗಿ ಇಡೀ ರಾತ್ರಿ ನಂಜುಂಡಸ್ವಾಮಿ ಅವರನ್ನು ಬಂಧನದಲ್ಲಿರಿಸಿದ್ದು ಇಂದು ಬೆಳಿಗ್ಗೆ ಉಪಾಯ ಮಾಡಿ ತಹಸೀಲ್ದಾರ್ ಮುಂದೆ ಹಾಜರುಪಡಿಸಲಾಗಿದೆ. ಪ್ರತಿ ಸಾರಿ ಸಚಿವ ಸೋಮಣ್ಣ ಯಾವುದಾದರೂ ಕಾರ್ಯಕ್ರಮ ಮಾಡುವಾಗ ನಂಜುಂಡಸ್ವಾಮಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅವರು  ಬಲಗೈ ಸಮುದಾಯಕ್ಕೆ ಸೇರಿದ್ದು ಅವರಪರ ಧ್ವನಿ ಎತ್ತುತಿದ್ದಾರೆ ಎಂಬ ಕಾರಣಕ್ಕಾಗಿ ಪ್ರತಿ ಸಾರಿ ಸೋಮಣ್ಣ ಅಧಿಕಾರಿಗಳು, ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಬಂಧಿಸಲಾಗುತ್ತಿದೆ ಎಂದು ಪ್ರಸನ್ನ ಕುಮಾರ್ ಆರೋಪಿಸಿದರು

ಸಚಿವ ವಿ.ಸೋಮಣ್ಣರಿಂದ ಬಲಗೈ ಸಮುದಾಯಕ್ಕೆ ಅನ್ಯಾಯ:   

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಜಿಲ್ಲೆಯ ಅಭಿವೃದ್ದಿ ಒತ್ತು ಕೊಡುತ್ತಿಲ್ಲ.  ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಿವೇಶನ ಹಂಚಿಕೆ ಕಾರ್ಯಕ್ರಮ ನಡೆದಿದೆ ಅದರಲ್ಲಿ ಪರಿಶಿಷ್ಠ ಜಾತಿಯ ಮಾದಿಗ ಸಮುದಾಯಕ್ಕೆ 175 ನಿವೇಶನವನ್ನು  ಮಂಜೂರು ಮಾಡಿ  ವಿಂಗಡನೆ ಮಾಡಿದ್ದಾರೆ. ಅದು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಮಾತ್ರ. ಸೀಮಿತವಾಗಿದ್ದು, ಎಸ್‌ ಸಿಯಲ್ಲಿ 101 ಜಾತಿಗಳು ಇವೆ. ಅದರಲ್ಲಿ ಮಾದಿಗ ಸಮುದಾಯವನ್ನು ಓಲೈಕೆ ಮಾಡಿದ್ದು, ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಈ ವಿಚಾರ ಪ್ರತಿಭಟನೆ ನಡೆದಿದೆ ಆವಾಗ ಬಲಗೈ ಸಮುದಾಯಕ್ಕೆ ನಿವೇಶನ ಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ, ಹೊರತು ಜಿಲ್ಲಾಧಿಕಾರಿಗಳನ್ನು ಕರೆದು ಸ್ಥಳ ಗುರುತಿಸುವಂತೆ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಇದರ ಉದ್ದೇಶ ಮಾದಿಗ ಸಮುದಾಯವನ್ನು ಓಲೈಕೆ ಮಾಡುವ ಮೂಲಕ ಪರಿಶಿಷ್ಠ ಜಾತಿಯನ್ನು ಒಡೆಯುವ ಕೆಲಸ ಮಾಡಿತ್ತಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದ ಮೂಲಕ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ಅವರ ಹೇಳಿಕೆ ನೀಡಿದ್ದರೂ ಎಂದು ಬಂಧಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪ್ಪಾರ ಎಸ್‌ ಟಿ ಹೋರಾಟ ಸಮಿತಿ ಅಧ್ಯಕ್ಷ ಬಾಗಳಿ ರೇವಣ್ಣ, ಕನ್ನಡ ಸಂಘಟನೆಗಳ ಮುಖಂಡರಾದ ಸುರೇಶ್‌ ವಾಜಪೇಯಿ, ನಮ್ಮನೆ ಪ್ರಶಾಂತ್, ಮಂಜುನಾಯಕ, ಬಂಗಾರನಾಯಕ, ಕೆಂಪರಾಜು ಹಾಜರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ