ಗುಂಡೂರು ಗ್ರಾಮ ಪಂಚಾಯತಿ PDO ಸಮಯದ ಮಿತಿ ಗೊತ್ತಿಲ್ಲದ ಅಧಿಕಾರಿ!: ಸಾರ್ವಜನಿಕರಿಂದ ಆಕ್ರೋಶ
ಕಾರಟಗಿ ತಾಲೂಕಿನ ಗುಂಡೂರು ಗ್ರಾಮ ಪಂಚಾಯತಿ ಪಿಡಿಓ ಮತ್ತು ಕಾರ್ಯದರ್ಶಿ ಇಬ್ಬರ ಅಧಿಕಾರಿಗಳು ಸರ್ಕಾರದ ಆದೇಶವು ಇವರ ಪಾಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಯಾವುದೇ ಅಧಿಕಾರಿಯೂ ಸರ್ಕಾರದ ಆದೇಶದ ಪ್ರಕಾರ ಬೆಳಿಗ್ಗೆ 10:30 ರಿಂದ ಸಾಯಂಕಾಲ 5:30ರ ವರೆಗೆ ಸಮಯದ ಮಿತಿ ಇರುತ್ತದೆ. ಆದರೆ ಇಲ್ಲಿರುವಂತಹ ಪಿಡಿಓ ತಾನು ಆಡಿದೆ ಆಟ, ತಾನು ಮಾಡಿದ್ದೆ ಪಾಠ ಎಂಬ ಹಾಗೆ ಇವರು ನಡೆದುಕೊಳ್ಳುತ್ತಿದ್ದಾರೆ.
ಇವರು ಸರ್ಕಾರ ಆದೇಶವನ್ನು ಗಾಳಿಗೆ ತೂರಿ ಮನಬಂದಂತೆ ನಡೆದುಕೊಳ್ಳುತ್ತಾರೆ. ಸರಿಯಾದ ಸಮಯಕ್ಕೆ ಬಾರದೇ ಮಧ್ಯಾಹ್ನ 12ಗಂಟೆಗೆ ಅಥವಾ 2 ಗಂಟೆಗೆ ಪಂಚಾಯತಿಗೆ ಬರುತ್ತಾರೆ ಇವರಿಗೆ ಸಮಯದ ಮಿತಿ ಗೊತ್ತಿಲ್ಲವೇ ಅಥವಾ ಸಮಯದ ಮಿತಿ ಗೊತ್ತಿದ್ದರೂ ಕೂಡ ಈ ರೀತಿ ಸುಮ್ಮನೆ ತಾಲೂಕಿನಲ್ಲಿ ಕಾಲಹರಣ ಮಾಡುತ್ತಾರೆ ಎಂಬುದು ಸಾರ್ವಜನಿಕರಿಗೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಾರ್ವಜನಿಕರು ಮೊಬೈಲ್ ಗೆ ಕರೆ ಮಾಡಿದರೆ ಯಾವುದೇ ಕರೆಗಳನ್ನು ಸ್ವೀಕರಿಸುವುದಿಲ್ಲ. ಯಾಕೆ ಅಂತ ಪ್ರಶ್ನೆ ಮಾಡಿದ್ರೆ, ಏನಾದ್ರೂ ಒಂದು ಕುಂಟು ನೆಪ ಹೇಳಿ ಜಾರಿ ಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿ ಬಂದಿದೆ.
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ಕಾರ್ಯಾಲಯದ್ದಲ್ಲಿ ಇರುವುದಿಲ್ಲ ಮತ್ತು ಸಿಬ್ಬಂದಿಯವರನ್ನು ಯಾಕೆ ಪಂಚಾಯತಿಯಲ್ಲಿ ಸರಿಯಾಗಿರುವುದಿಲ್ಲ ಎಂದು ಕೇಳಿದರೆ ನಮಗೆ ಮೇಲಧಿಕಾರಿಗಳಿಂದ ಕರೆಗಳು ಬರುತ್ತವೆ ಎಂದು ಸುಳ್ಳು ಹೇಳುತ್ತಾರೆ ಎಂದು ಊರಿನ ಮುಖಂಡರು ಆರೋಪ ಮಾಡುತ್ತಿದ್ದಾರೆ.
ಅದೇ ರೀತಿಯಾಗಿ ಸಾರ್ವಜನಿಕರ ತಮ್ಮ ಸಮಸ್ಯೆಗಳನ್ನು ಅಥವಾ ಊರಿಗೆ ಸಂಬಂಧಪಟ್ಟ ವಿಚಾರಗಳನ್ನು ಕೇಳಲು ಹೋದರೆ ಅವರ ಜೊತೆ ಅಸಭ್ಯ ವರ್ತನೆಯಿಂದ ನಡೆದುಕೊಳ್ಳುತ್ತಾರೆ. ಈ ರೀತಿಯಾಗಿ ನಿರ್ಲಕ್ಷ್ಯವಾಗಿ ಕಾರ್ಯ ನಿರ್ವಹಿಸುವ ಪಿಡಿಓ ಅವರ ವಿರುದ್ಧ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಇವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka