ಸ್ವಚ್ಛ ಭಾರತ ಯೋಜನೆ ಮಂಗಮಾಯ: ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಗಂಗಾವತಿ: ನಗರದಲ್ಲಿ ಬಸ್ ಸ್ಟ್ಯಾಂಡ್ ಮುಂಭಾಗ ಇರುವ ಗಾರ್ಡನ್ ಒಳಗಡೆ ಮತ್ತು ಹಿಂಬದಿಯಲ್ಲಿ ಕಸದ ರಾಶಿ ರಾಶಿಗಳು ಕಾಣುತ್ತಿವೆ ಮತ್ತು ಇದೇ ಗಾರ್ಡನ್ ಪಕ್ಕದಲ್ಲಿ ಹಿಂಬದಿಯಲ್ಲಿ ತಾಲೂಕು ಪಂಚಾಯಿತಿಯಿಂದ ಸ್ವಲ್ಪ ಮುಂದುಗಡೆ ಬಂದರೆ ಇದೆ ಗಾರ್ಡನ್ ಪಕ್ಕದಲ್ಲಿ ನೂತನವಾಗಿ ಉದ್ಘಾಟನೆ ಆಗಿರುವ ನಗರಸಭೆ ಕಟ್ಟಡ ಕೂಡ ಇದೆ. ಇಷ್ಟೆಲ್ಲಾ ಆಫೀಸ್ ಗಳಿದ್ದರೂ ಕೂಡ ಇಲ್ಲಿ ಸ್ವಚ್ಛತೆ ಮಂಗಮಾಯವಾಗಿದೆ.
ಪ್ರತಿನಿತ್ಯ ಇದೆ ಗಾರ್ಡನ್ ಸುತ್ತಮುತ್ತ ಎಗ್ ರೈಸ್ ಬಂಡಿ, ಚಿಕನ್ ಕಬಾಬ್ ಬಂಡಿಗಳು ಸಾಲು ಸಾಲಾಗಿ ನಿಲ್ಲುತ್ತವೆ. ಎಗ್ ರೈಸ್ ಚಿಕನ್ ಬಂಡಿಗಳ ಮಾಲೀಕರು ಗಾರ್ಡನ್ ಹೊರಗಡೆ ಇರುವಂತ ಕಸವನ್ನು ಗೂಡಿಸಿ ಗಾರ್ಡನ್ ಒಳಗಡೆ ಕಸ ಹಾಕಿ ಗಾರ್ಡನ್ ನನ್ನು ಕಸದ ತಿಪ್ಪಿ ಗುಂಡಿಯಾಗಿ ಮಾಡುತ್ತಿದ್ದಾರೆ.
ಈ ಗಾರ್ಡನ್ ಬಸ್ ಸ್ಟಾಂಡ್ ಗೆ ಹತ್ತಿರ ಇರುವುದರಿಂದ ಹಳ್ಳಿಗಳಿಂದ ಬಂದಿರುವ ವಿದ್ಯಾರ್ಥಿಗಳು ಮತ್ತು ಸಣ್ಣಪುಟ್ಟ ವ್ಯಾಪಾರ ಮಾಡಲಿಕ್ಕೆ ಬರುವ ಸಾರ್ವಜನಿಕರು. ಮಧ್ಯಾಹ್ನದಲ್ಲಿ ಗಾರ್ಡನ್ ಒಳಗಡೆ ಕುಳಿತುಕೊಂಡು ಸ್ವಲ್ಪ ವಿಶ್ರಾಂತಿ ಪಡೆಯಲಿಕ್ಕೆ ಬರುತ್ತಾರೆ. ಆದರೆ ಗಾರ್ಡನ್ ಒಳಗಡೆ ಕಸದ ರಾಶಿ ಗುಡ್ಡೆಯಾಗಿರುವುದರಿಂದ ಗಾರ್ಡನ್ ಒಳಗಡೆ ಕೂಡಲಿಕ್ಕೆ ಜನರು ಭಯಪಡುತ್ತಾರೆ ಯಾಕಪ್ಪ ಜನರಿಗೆ ಭಯ ಅಂದರೆ ಗಾರ್ಡನ್ ಒಳಗಡೆ ಕಸದ ರಾಶಿ ಇರುವುದರಿಂದ ಮತ್ತು ಕಸದ ಒಳಗಡೆ ಚೋಳು ಹಾವು ಸೇರಿರಬಹುದೆಂಬ ಭಯದಿಂದ ವಿದ್ಯಾರ್ಥಿಗಳು ಸಾರ್ವಜನಿಕರು ಗಾರ್ಡನ್ ಒಳಗಡೆ ವಿಶ್ರಾಂತಿ ಪಡೆಯುವುದು ಬಿಟ್ಟು ಬೀದಿ ಪಕ್ಕದಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಅನಿವಾರ್ಯವಾಗಿದೆ.
ಇದೇ ಗಾರ್ಡನ್ ಹಿಂಬದಿಯಲ್ಲಿ ಇರುವ ತಾಲೂಕು ಪಂಚಾಯಿತಿ ಒಳಗಡೆಯಿಂದ ಬರುವ ಚರಂಡಿ ನೀರು ಮುಂದುಗಡೆ ಹರಿದು ಹೋಗಲಿಕ್ಕೆ ಚರಂಡಿ ಅವಸ್ಥೆ ಇಲ್ಲದಿರುವುದರಿಂದ ಚರಂಡಿ ನೀರು ನಿಂತಲ್ಲಿ ನಿಂತು ಗಬ್ಬು ದುರ್ವಾಸನೆ ಬರುತ್ತದೆ.
ಗಾರ್ಡನ್ ಹಿಂದುಗಡೆರುವ ರಸ್ತೆಯು ಈ ರಸ್ತೆ ಮೂಲಕ ಪ್ರತಿನಿತ್ಯ ಜೂನಿಯರ್ ಕಾಲೇಜಿಗೆ ವಿದ್ಯಾರ್ಥಿಗಳು ಮತ್ತು ಶಾಲಾ ಮಕ್ಕಳು ಇದೇ ರಸ್ತೆ ಮೂಲಕ ಶಾಲೆಗೆ ಹೋಗುತ್ತಾರೆ. ಇಲ್ಲಿ ನಿಂತಿರುವಂತಹ ಚರಂಡಿ ನೀರಿನ ಗಬ್ಬುದುರ್ವಾಸನೆ ದಿಂದ ಪ್ರತಿನಿತ್ಯ ಮೂಗು ಮುಚ್ಚಿಕೊಂಡು ಶಾಲೆಗೆ ಹೋಗುವ ಪರಿಸ್ಥಿತಿ ಬಂದಿದೆ ಎಂಬುದು ಮಕ್ಕಳು ಮಾತಾಡಿಕೊಳ್ಳುತ್ತಿದ್ದಾರೆ.
ಈ ರಸ್ತೆಯ ಮೇಲೆ ತಾಲೂಕು ಪಂಚಾಯತ್ ಅಧಿಕಾರಿಗಳು ಓಡಾಡುತ್ತಾರೆ. ಈ ಗಬ್ಬುನಾರುತ್ತಿರುವ ವಾಸನೆ ಈ ಅಧಿಕಾರಿಗಳಿಗೆ ಮೂಗಿಗೆ ತಾಗುತ್ತಿಲ್ಲವೇ ಅಥವಾ ವಾಸನೆ ಬಂದರೂ,ಸುಮ್ಮನೆ ಮಗು ಮುಚ್ಕೊಂಡು ಹೋಗುತ್ತಿದ್ದಾರೆಯೇ? ಅಥವಾ ನಮಗೆ ವಿಷಯ ಸಂಬಂಧ ಇಲ್ಲವೆಂದು ಹೋಗುತ್ತಿದ್ದಾರೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ನಮ್ಮ ದೇಶದ ಪ್ರಧಾನ ಮಂತ್ರಿ ಸ್ವಚ್ಛ ಭಾರತ್ ಮಿಷನ್ ಯೋಜನೆಗೆ ಕೋಟಿ ಕೋಟಿ ಮಂಜೂರು ಮಾಡಿದ್ದಾರೆ. ಆ ಕೋಟಿ ಹಣವು ಎಲ್ಲಿ ಹೋಯಿತು? ಎಂದು ಪ್ರಶ್ನಿಸುತ್ತಿರುವ ಸಾರ್ವಜನಿಕರು, ಸ್ವಚ್ಛತೆ ಕೈಗೊಳ್ಳದ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka