ಕೇಸರಿ ಬಿಕಿನಿಗೆ ವಿರೋಧ: ಪಠಾಣ್ ಸಿನಿಮಾ ವಿರುದ್ಧ ಬಾಯ್ಕಾಟ್ ಕರೆ
ಮುಂಬೈ: ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ತೊಟ್ಟಿರುವುದಕ್ಕೆ ಬಲಪಂಥೀಯರು ಕಿಡಿಕಾರಿದ್ದು, ಸಿನಿಮಾ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.
ಬೇಷರಂ ರಂಗ್ ಹಾಡು ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿತ್ತು. ಹಾಡಿನಲ್ಲಿ ದೀಪಿಕಾ ಪಡುಕೋಣೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ಹಾಡು ಬಿಡುಗಡೆಯಾಗಿ ಕೆಲವು ದಿನಗಳ ಕಾಲ ಬಿಕಿನಿ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಇದೀಗ ಕೇಸರಿ ಬಣ್ಣದ ಬಿಕಿನಿ ತೊಟ್ಟಿರುವ ವಿವಾದ ಕೇಳಿ ಬಂದಿದೆ.
ಜನವರಿ 25ರಂದು ಪಠಾಣ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವ ವೇಳೆಯೇ ಸಿನಿಮಾದ ಹಾಡಿನ ಬಗ್ಗೆ ಅಪಸ್ವರ ಎತ್ತಲಾಗಿದೆ. ಜೊತೆಗೆ ಬಾಯ್ಕಾಟ್ ಕರೆಯೂ ನೀಡಲಾಗಿದೆ.
ಬಾಯ್ಕಾಟ್ ಕೂಗು ಒಂದೆಡೆ ಕೇಳಿ ಬಂದರೆ ಮತ್ತೊಂದೆಡೆಯಲ್ಲಿ ಶಾರೂಖ್ ಖಾನ್ ಫ್ಯಾನ್ಸ್ ಚಿತ್ರದ ಪರವಾಗಿ ಮಾತನಾಡುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಹಾಡು, ಹಾಗಾಗಿ ಈ ರೀತಿಯಾಗಿ ಚಿತ್ರಿಸಲಾಗಿದೆ. ಹಾಡಿನಲ್ಲಿ ಎಲ್ಲ ಬಣ್ಣದ ವಸ್ತ್ರಗಳನ್ನೂ ಕೂಡ ಬಳಸಲಾಗಿದೆ ಇದೆಲ್ಲ ಅಸೂಯೆಯ, ದ್ವೇಷದ ಬಾಯ್ಕಾಟ್ ಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka