ಹೊಸ ಬೋರ್ ಕೊರೆಸುವಾಗ ಹಳೆಯ ಬೋರ್ ನಿಂದ ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಚಿಕ್ಕಮಗಳೂರು: ಹೊಸ ಬೋರ್ ಕೊರೆಯುವಾಗ ಹಳೇ ಬೋರಲ್ಲಿ ಮುಗಿಲೆತ್ತರಕ್ಕೆ ನೀರು ಚಿಮ್ಮಿದ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ ನಡೆದಿದೆ.
ಶೇಖರಪ್ಪ ಎಂಬುವರ ತೋಟದಲ್ಲಿದ್ದ ಹಳೆಯ ಬೋರ್ ವೆಲ್ ಬತ್ತಿದ ಹಿನ್ನೆಲೆಯಲ್ಲಿ ಹೊಸ ಬೋರ್ ವೇಲ್ ಕೊರೆಸುತ್ತಿದ್ದರು. 50 ಅಡಿ ತಲುಪಿದ ವೇಳೆ ಹೊಸ ಬೋರ್ ವೇಲ್ ನಲ್ಲಿ ನೀರು ಸಿಕ್ಕಿದೆ. ಇದೇ ವೇಳೆ ಹಲವು ವರ್ಷಗಳಿಂದ ನೀರಿಲ್ಲದೇ ಬತ್ತಿ ಹೋಗಿದ್ದ ಹಳೆಯ ಬೋರ್ ನಿಂದ ನೀರು ಚಿಮ್ಮಿದೆ.
ಕೊನೆಗೆ ಹಳೆಯ ಬೋರ್ ನ ಕೇಸಿಂಗ್ ಪೈಪ್ ಬಂದ್ ಮಾಡಿ ಹೊಸ ಬೋರ್ ವೆಲ್ ಕೊರೆಯುವುದನ್ನು ಮುಂದುವರಿಸಲಾಗಿದೆ. ಬತ್ತಿದ್ದ ಬೋರ್‍ನಲ್ಲಿ ಮುಗಿಲೆತ್ತರಕ್ಕೆ ಚಿಮ್ಮುವ ನೀರನ್ನ ನೋಡಲು ಜನರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು.
ಕಳೆದ ಎರಡು ವರ್ಷಗಳಿಂದ ಬರದ ತವರು ಕಡೂರಲ್ಲಿ ಸಮೃದ್ಧ ಮಳೆಯಾಗಿದೆ. ಹೀಗಾಗಿ ಅಂತರ್ಜಲದ ಪ್ರಮಾಣ ಹೆಚ್ಚಿದೆ ಎಂದು ಹೇಳಲಾಗಿದೆ. ಹಳೆಯ ಬೋರ್ ನಿಂದ ಬೋರ್ ಲಾರಿಗಿಂತ ಎತ್ತರಕ್ಕೆ ನೀರು ಚಿಮ್ಮಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka