5ನೇ ತರಗತಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಚುಚ್ಚಿ ಮಹಡಿಯಿಂದ ಕೆಳಗೆ ಎಸೆದ ಶಿಕ್ಷಕಿ!
ನವದೆಹಲಿ: ಶಿಕ್ಷಕಿಯೊಬ್ಬಳು 5ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ಕತ್ತರಿಯಿಂದ ಚುಚ್ಚಿ ಮೊದಲ ಮಹಡಿಯಿಂದ ಕೆಳಗೆ ಎಸೆದ ಆತಂಕಕಾರಿ ಘಟನೆ ರಾಷ್ಟ್ರದ ರಾಜಧಾನಿಯಲ್ಲೇ ನಡೆದಿದೆ.
ಕೇಂದ್ರ ದೆಹಲಿಯ ಮಾಡೆಲ್ ಬಸ್ತಿ ಪ್ರದೇಶದ ಪ್ರಾಥಮಿಕ ವಿದ್ಯಾಲಯದಲ್ಲಿ ನಡೆದ ಈ ಘಟನೆ ಸಾರ್ವಜನಿಕರನ್ನು ತೀವ್ರವಾಗಿ ಆಕ್ರೋಶಕ್ಕೀಡು ಮಾಡಿದ್ದು, ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ಶಾಲಾ ಆವರಣದಲ್ಲಿ ಭಾರೀ ಜನಸ್ತೋಮ ಜಮಾಯಿಸಿತ್ತು.
ಗೀತಾ ದೇಶ್ವಾಲ್ ಎಂಬ ಶಿಕ್ಷಕಿ ಈ ದುಷ್ಕೃತ್ಯವನ್ನು ಎಸಗಿದ್ದು, ಶಿಕ್ಷಕಿಯ ದಾಳಿಯಿಂದ ಗಾಯಗೊಂಡಿದ್ದ ಬಾಲಕಿಯನ್ನು ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಬಾಲಕಿಗೆ ಯಾವುದೇ ಗಂಭೀರ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾಳೆ.
ಘಟನೆ ಸಂಬಂಧ ಶಿಕ್ಷಕಿ ವಿರುದ್ಧ ಸೆಕ್ಷನ್ 307 ಅಡಿಯಲ್ಲಿ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ಎಂಸಿಡಿಯು ಶಿಕ್ಷಕಿಯನ್ನು ತಕ್ಷಣದಿಂದಲೇ ಅಮಾನತುಗೊಳಿಸಿದ್ದು ಇಲಾಖೆ ವತಿಯಿಂದ ತೀವ್ರ ತನಿಖೆ ನಡೆಯುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka