ತಾಳಿಕಟ್ಟುವ ಶುಭ ವೇಳೆ… ಈ ವಧು ಮಾಡಿದ್ದೇನು ಗೊತ್ತಾ? - Mahanayaka

ತಾಳಿಕಟ್ಟುವ ಶುಭ ವೇಳೆ… ಈ ವಧು ಮಾಡಿದ್ದೇನು ಗೊತ್ತಾ?

25/12/2020

ಹೈದರಾಬಾದ್: ಮದುವೆ ಮಂಟಪದಲ್ಲಿ ವಧು-ವರರು ಕುಳಿತಿದ್ದರು. ಪುರೋಹಿತರು ಮಂತ್ರಪಠಿಸುತ್ತಿದ್ದರು. ಅದ್ಯಾಕೋ, ದಿನ ನೋಡಿದ ಜ್ಯೋತಿಷಿ ಅದು ಎಂತಹ ದಿನ ನೀಡಿದ್ದಾನೋ ಗೊತ್ತಿಲ್ಲ, ಪುರೋಹಿತರು ತಾಳಿ ಕಟ್ಟಿ ಎಂದು ಹೇಳುತ್ತಿದ್ದಂತೆಯೇ ಕುಳಿತಿದ್ದ ವಧು ಎದ್ದು ನಿಂತಳು… ಇಡೀ ಸಭಾಂಗಣವೇ ಮೌನವಾಗುತ್ತಿದ್ದಂತೆಯೇ ವಧು… “ನನಗೆ ಈ ಮದುವೆ ಇಷ್ಟ” ಇಲ್ಲ ಎಂದು ಹೇಳಿ ಬಿಟ್ಟಳು.

ಇದು ಯಾವುದೋ ಸಿನಿಮಾದ ಕಥೆ ಅಲ್ಲ… ಹೈದರಾಬಾದ್ ನ ಮೆಹಬೂಬಬಾದ್ ನ ಮರಿಪಾದ ಮಂಡಲದಲ್ಲಿ ನಡೆದ ರಿಯಲ್ ಸ್ಟೋರಿ. ಮರಿಪಾದ ಮಂಡಲದ ಗುಂಡೆಪುಡಿ ನಿವಾಸಿ ಯಾಮಿನಿ ಕೃಷ್ಣಮೂರ್ತಿ ಹಾಗೂ ಕುರವಿ ಮಂಡಲದ ಕಂಪೆಲ್ಲಿ ನಿವಾಸಿ ರಾಜೇಶ್ ಅವರ ವಿವಾಹ ನಿಶ್ಚಯವಾಗಿತ್ತು. ಆದರೆ ಮದುವೆ ಮಂಟಪದಲ್ಲಿ ಇಂತಹ ಘಟನೆ ನಡೆದಿದೆ.

ಹಿರಿಯರು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳದೇ, ಅವರ ಬಳಿಯಲ್ಲಿಒಂದೂ ಮಾತು ಕೇಳದೇ ಮದುವೆ ಮಾಡಿಸಲು ಹೊರಡುತ್ತಾರೆ. ಗಂಡು ಮಗನಿಗೆ ಸಾವಿರ ಬಾರಿ ಹೆಣ್ಣು ಇಷ್ಟ ಆದ್ಲಾ? ಎಂದು ಕೇಳುವ ಪೋಷಕರು, ಹೆಣ್ಣಿನ ಬಳಿ, ಗಂಡು ಇಷ್ಟವೇ? ಕೇಳುವುದೇ ಇಲ್ಲ. ಆಗಾಗಿ ಬಹಳಷ್ಟು ಹೆಣ್ಣು ಮಕ್ಕಳು ತಲೆ ತಗ್ಗಿಸಿಕೊಂಡು ತಮಗೆ ಇಷ್ಟವಿಲ್ಲದ ವರನಿಂದ ತಾಳಿಕಟ್ಟಿಸಿಕೊಂಡು ಇಡೀ ಜೀವನ ನರಕ ಮಾಡಿಸಿಕೊಳ್ಳುತ್ತಾರೆ. ಆದರೆ, ಯಾಮಿನಿ ಮಾತ್ರ ಕೊನೆಯ ಕ್ಷಣದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾಳೆ.

ಯಾಮಿನಿ ತನಗೆ ಮದುವೆ ಇಷ್ಟ ಇಲ್ಲ ಎಂದು ಹೇಳುತ್ತಿದ್ದಂತೆಯೇ ಪೋಷಕರು ಬಲವಂತಪಡಿಸಲು ಮುಂದಾದರು. ಆಗ  ತಕ್ಷಣವೇ ಆಕೆ 100 ನಂಬರ್ ಗೆ ಡಯಲ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಅನಿವಾರ್ಯವಾಗಿ ಯಾಮಿನಿ ಇಷ್ಟಪಡುತ್ತಿದ್ದ ಯುವಕನ ಜೊತೆಗೆ ಆಕೆಗೆ ಮದುವೆ ಮಾಡಿಸಲಾಗಿದೆ. ಇತ್ತ ಇದ್ಯಾವುದರ ಪರಿವೇ ಇಲ್ಲದೇ ಬಂದಿದ್ದ ಅಮಾಯಕ ವರನಿಗೆ  ಮದುವೆ ಮಂಟಪದಲ್ಲಿ ಸಂಬಂಧಿಕರ ಹುಡುಗಿಯೊಬ್ಬಳಿಗೆ ತಾಳಿ ಕಟ್ಟಿಸಿ ಮದುವೆ ಕಾರ್ಯ ಮುಗಿಸಿದ್ದಾರೆ.

ಇತ್ತೀಚಿನ ಸುದ್ದಿ