ಹೃದಯ ವಿದ್ರಾವಕ ಘಟನೆ: ಕೆರೆದಾಟುತ್ತಿದ್ದಾಗ ನೀರಲ್ಲಿ ಮುಳುಗಿ ತಾಯಿ—ಮಗಳು ಸಾವು
ಚಿಕ್ಕಮಗಳೂರು: ಕೆರೆ ದಾಟುವಾಗ ತಾಯಿ ಮಗಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬೆಳವಾಡಿ ಸಮೀಪ ನಡೆದಿದೆ.
ಶೋಭಾ (40) ಮತ್ತು ವರ್ಷ(8) ಮೃತ ದುರ್ದೈವಿಗಳಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ವಡ್ಡರಹಳ್ಳಿ ಕೆರೆ ದಾಟುವಾಗ ಮಗಳು ನೀರಿನಲ್ಲಿ ಸಿಲುಕಿದ್ದು, ಮಗಳನ್ನ ರಕ್ಷಿಸಲು ಹೋದ ತಾಯಿಯೂ ನೀರಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಮೃತ ಶೋಭಾ ಜೊತೆಯಲ್ಲಿದ್ದ ಮಗ ಚೇತನ್ ಪರಾಗಿದ್ದಾನೆ.
ದನ ಮೇಯಿಸಲು ಹೋದಾಗ ಈ ಘಟನೆ ನಡೆದಿದೆ. ನೀರಿನ ಪ್ರಮಾಣ ಕಡಿಮೆ ಇರುವ ಕಡೆ ತಾಯಿ, ಮಗಳು, ಮಗ ದಾಟಲು ಯತ್ನಿಸಿದ್ದಾರೆ. ಮಗಳು ನೀರಿನ ಪ್ರಮಾಣ ಹೆಚ್ಚಿರುವ ಕಡೆ ಹೋಗಿ ನೀರಲ್ಲಿ ಸಿಲುಕಿಕೊಂಡ ಹಿನ್ನೆಲೆ ರಕ್ಷಣೆಗೆ ತಾಯಿ ತೆರಳಿದ್ದು ಇಬ್ಬರೂ ನೀರು ಪಾಲಾಗಿದ್ದಾರೆ. ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw