ವಾಸ್ತು ಹೋಮದ ಹೊಗೆಯ ನಡುವೆಯೇ ಮನೆಗೆ ನುಗ್ಗಿ ಕದ್ದ ಕಳ್ಳ!
ಉಳ್ಳಾಲ ಗೃಹ ಪ್ರವೇಶದ ಮನೆಯಲ್ಲಿ ವಾಸ್ತು ಹೋಮ ನಡೆಯುತ್ತಿದ್ದ ವೇಳೆ ಕಳ್ಳನೋರ್ವ ಹೋಮದ ಹೊಗೆಯ ಮರೆಯಲ್ಲಿ ಮನೆಯ ಕೋಣೆಗೆ ನುಗ್ಗಿ 15 ಸಾವಿರ ಹಣ ಮೊಬೈಲ್ ಚಾರ್ಜರ್ ಕಳವು ನಡೆಸಿದ್ದಲ್ಲದೇ ಸಮೀಪದ ಮತ್ತೊಂದು ಮನೆಯಿಂದ ಲಕ್ಷಾಂತರ ಮೌಲ್ಯದ ನಗ–ನಗದು ಕಳವು ಮಾಡಿರುವ ಘಟನೆ ನಡೆದಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಬಳಿಯಲ್ಲಿ ಈ ಘಟನೆ ನಡೆದಿದ್ದು, ಡಿಸೆಂಬರ್ 10ರಂದು ರಾತ್ರಿ ಸ್ಮಿತಾ—ದಾಮೋದರ್ ದಂಪತಿ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಡ್ಕ ಬೈಲು ಎಂಬಲ್ಲಿ ತಾವು ನಿರ್ಮಿಸಿದ ಮನೆಯಲ್ಲಿ ವಾಸ್ತು ಹೋಮ ನಡೆಸುತ್ತಿದ್ದರು.
ಹೋಮದ ದಟ್ಟ ಹೊಗೆಯ ಲಾಭ ಪಡೆದ ಕಳ್ಳ ಎಲ್ಲರ ಎದುರು ಮನೆಯ ಕೋಣೆಗೆ ನುಗ್ಗಿ ಬ್ಯಾಗ್ ನಲ್ಲಿದ್ದ 15 ಸಾವಿರ ರೂ. ನಗದು, ಮೊಬೈಲ್ ಚಾರ್ಜರ್ ಮತ್ತು ಬೆಳೆಬಾಳುವ ಕಾಸ್ಮೆಟಿಕ್ಸ್ ಕಳವು ಮಾಡಿದ್ದಾನೆ.
ಇದೇ ದಿನ ಇಲ್ಲಿನ ಮತ್ತೊಂದು ಮನೆಯಲ್ಲಿಯೂ ಕಳವು ನಡೆದಿದ್ದು, ಶಿವ ಸುಬ್ರಹ್ಮಣ್ಯ ಪ್ರಸಾದ್ ಭಟ್ ಎಂಬವರ ಮನೆಯ ಬಾಗಿಲು ಮುರಿದು ಕೋಣೆಯೊಳಗಿನ ಕಪಾಟಿನಲ್ಲಿದ್ದ 11 ಸಾವಿರ ರೂ, 32 ಗ್ರಾಂ ಚಿನ್ನ, 8 ಬೆಳ್ಳೆಯ ನಾಣ್ಯ ಮತ್ತು 3 ರೇಡೋ ವಾಚ್ ಗಳು ಸೇರಿದಂತೆ ಒಟ್ಟು 1.49 ಲಕ್ಷ ರೂಪಾಯಿ ಮೌಲ್ಯದ ನಗ—ನಗದು ದೋಚಲಾಗಿದೆ.
ಘಟನೆ ಸಂಬಂಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿ ಕ್ಯಾಮರ ವಿಡಿಯೋ ಫೂಟೇಜ್ ಗಳ ಆಧಾರದಲ್ಲಿ ಕಳ್ಳರ ಶೋಧ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw