ಪಶುವೈದ್ಯ ಇಂಜೆಕ್ಷನ್ ನೀಡಿದ ಮರು ದಿನವೇ ಸತ್ತು ಹೋದ ಎತ್ತುಗಳು!
ಚಿಕ್ಕಮಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಲಕ್ಷಾಂತರ ಮೌಲ್ಯದ ಎತ್ತುಗಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ.
ವೈದ್ಯರು ಇಂಜೆಕ್ಷನ್ ನೀಡಿದ ಮರುದಿನವೇ ರಾಸುಗಳು ಸತ್ತು ಹೋಗಿದ್ದು, ಪಶುವೈದ್ಯ ಬಸವರಾಜ್ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡೇವಾ ಗ್ರಾಮದ ಶಂಕರ್ ಎಂಬುವರಿಗೆ ಸೇರಿದ ಎತ್ತುಗಳಿಗೆ ಪಶುವೈದ್ಯ ಬಸವರಾಜ್ ಇಂಜೆಕ್ಷನ್ ನೀಡಿದ್ದರು. ಇಂಜೆಕ್ಷನ್ ನೀಡಿದ ಮರುದಿನವೇ ಎತ್ತುಗಳು ಸಾವನ್ನಪ್ಪಿದ್ದು, ಈ ಬಗ್ಗೆ ಸೂಕ್ತ ನ್ಯಾಯಕೊಡಬೇಕು ಎಂದು ಪಶು ಆಸ್ಪತ್ರೆ ಮುಂದೆ ಎತ್ತುಗಳ ಮೃತದೇಹ ಇಟ್ಟು ಪ್ರತಿಭಟನೆ ನಡೆಸಲಾಯಿತು.
ಎತ್ತುಗಳಿಗೆ ಆರೋಗ್ಯ ಸರಿ ಇಲ್ಲದ ಹಿನ್ನೆಲೆಯಲ್ಲಿ ಪಶು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಎತ್ತುಗಳಿಗೆ ಗಂಟಲು ನೋವು ಎಂದಿದ್ದ ಪಶುವೈದ್ಯರು ಇಂಜೆಕ್ಷನ್ ನೀಡಿದ್ದರು. ಆದರೆ ಇಂಜೆಕ್ಷನ್ ನೀಡಿದ ಮರುದಿನವೇ ಎತ್ತುಗಳು ಸಾವನ್ನಪ್ಪಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka