ಕನ್ನಡ ರಥದ ಮುಂದೆ ಪೂಜಾರಿ ಭರ್ಜರಿ ಡಾನ್ಸ್ !
23/12/2022
ಚಿಕ್ಕಮಗಳೂರು: ಕಾಫಿನಾಡಿಗೆ ಕನ್ನಡ ರಥ ಆಗಮಿಸಿದ ವೇಳೆ ಕನ್ನಡ ರಥದ ಪೂಜಾರಿ ಭರ್ಜರಿ ಸ್ಟೆಪ್ ಹಾಕಿದ್ದು, ಎಲ್ಲರನ್ನೂ ಸಮೀಪಕ್ಕೆ ಕರೆದು ಉತ್ಸಾಹದಿಂದ ಡಾನ್ಸ್ ಮಾಡಿದ್ದಾರೆ.
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರು ಡಾನ್ಸ್ ಮಾಡಿದ್ದು, ಚಂಡೆ, ತಮಟೆ, ವಾದ್ಯಕ್ಕೆ ಮೈಮರೆತು ಸ್ಟೆಪ್ ಹಾಕಿದ್ದಾರೆ.
ಪೂಜಾರಿ ಜೊತೆಗೆ ಸಾಹಿತಿಗಳು ಹಾಗೂ ಅಧಿಕಾರಿಗಳು ಕೂಡ ಡಾನ್ಸ್ ಮಾಡುವ ಮೂಲಕ ಕನ್ನಡ ರಥಕ್ಕೆ ಭರ್ಜರಿಯಾಗಿ ಸ್ವಾಗತ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿಗಳು, ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka