ನೈತಿಕ ಪೊಲೀಸ್ ಅಂತ ಇಲ್ಲ, ಅನೈತಿಕ ಪೊಲೀಸ್ ಗಿರಿಗೆ ಕಡಿವಾಣ: ಸಚಿವ ಮಾಧುಸ್ವಾಮಿ
27/12/2022
ಕರಾವಳಿಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ವಿಚಾರವಾಗಿ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಕೇಳಿದ ಪ್ರಶ್ನೆಗೆ ಕಾನೂನು ಸಚಿವ ಮಾಧುಸ್ವಾಮಿ ಉತ್ತರಿಸಿದರು.
ಇದು ನೈತಿಕ ಪೊಲೀಸ್ ಗಿರಿಯೋ ಅನೈತಿಕ ಪೊಲೀಸ್ ಗಿರಿಯೋ ಅನ್ನೋದು ಗೊತ್ತಿಲ್ಲ. ನೈತಿಕ ಪೊಲೀಸ್ ಗಿರಿಯ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದರೆ, ಅದಕ್ಕೆ ಕಡಿವಾಣ ಹಾಕುವ ಕೆಲಸ ಮಾಡ್ತೇವೆ ಎಂದು ಮಾಧುಸ್ವಾಮಿ ಉತ್ತರಿಸಿದರು.
ನಾವು ಯಾರಿಗೂ ಫ್ರೀ ಹ್ಯಾಂಡ್ ಕೊಟ್ಟಿಲ್ಲ, ನೀವು ಹೋಗಿ ಮಾಡ್ಕೊಂಡು ಬರ್ಬಹುದು ಅಂತ. ಪೊಲೀಸ್ ಯಾವಾಗಲೂ ಪೊಲೀಸ್, ಮೋರಲ್ ಪೊಲೀಸ್ ಅಂತ ಒಂದು ಇರಕ್ಕಾಗಲ್ಲ ಎಂದು ಅವರು ಹೇಳಿದರು.