ಪ್ರಣವಾನಂದ ಸ್ವಾಮಿ ಕಾವಿ ತೊಟ್ಟು ಜನರಿಗೆ ಮೋಸ ಮಾಡ್ತಿದ್ದಾರೆ: ಭದ್ರಾನಂದ ಸ್ವಾಮಿ

ಬಿಲ್ಲವ ಸಮಾಜದ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿರುವ ಪ್ರಣವಾನಂದ ಸ್ವಾಮಿ ಕಾವಿ ತೊಟ್ಟು ಜನರಿಗೆ ಮೋಸ ಮಾಡುತ್ತಿದ್ದಾರೆ. ಅವರ ಹಿಂದೆ ಕ್ರಿಮಿನಲ್ ಕೇಸ್ ಗಳಿವೆ.
ಅವರಿಗೆ ಸನ್ಯಾಸಿ ಪರಂಪರೆ ಇಲ್ಲ. ಅವರು ಅಧ್ಯಾತ್ಮಿಕತೆಯ ಹೆಸರಲ್ಲಿ ಕೆಟ್ಟ ಆಟ ಆಡುತ್ತಿದ್ದಾರೆ. ಅವರಿಗೆ ಯಾರೂ ಪ್ರೋತ್ಸಾಹ ಕೊಡಬಾರದು ಎಂದು ಕೇರಳ ಮೂಲದ ಭದ್ರಾನಂದ ಸ್ವಾಮಿ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಣವಾನಂದ ಸ್ವಾಮಿ ಅವರನ್ನು ಬೆಂಬಲಿಸುವವರು ನಾರಾಯಣ ಗುರುಗಳ ಅನುಯಾಯಿಗಳಲ್ಲ. ಅವರ ಪಾದಯಾತ್ರೆಗೆ ಸರಕಾರ ಅನುಮತಿ ನೀಡಬಾರದು ಎಂದು ಬೆಂಗಳೂರಿನಲ್ಲಿ ನೆಲೆಸಿರುವ ಕೇರಳ ಮೂಲದ ಭದ್ರಾನಂದ ಸ್ವಾಮಿ ಆಗ್ರಹಿಸಿದ್ದಾರೆ.
ತಾನು ನಾರಾಯಣ ಗುರುಗಳ ವಂಶಸ್ಥ. ನಾರಾಯಣ ಗುರುಗಳು ಮದ್ಯಪಾನ ವಿರೋಧಿಗಳಾಗಿದ್ದರು. ಆದರೆ ಪ್ರಣವಾನಂದ ಸ್ವಾಮಿ ಬಿಲ್ಲವರ ಮೂಲ ಕುಲ ಕಸುಬು ಆಗಿದ್ದ ಶೇಂದಿ ವ್ಯವಹಾರಕ್ಕೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಕರ್ನಾಟಕದಲ್ಲಿ ಶೇಂದಿ ವ್ಯವಹಾರ ನಡೆಸುವುದು ಅವರ ಉದ್ದೇಶವಿದ್ದಂತೆ ಕಾಣುತ್ತಿದೆ. ಮೂರ್ತೆದಾರಿಕೆಯು ಉತ್ತಮ ಕಸುಬು ಅಲ್ಲ ಎಂದು ಅವರು ಹೇಳಿದರು.
ಪ್ರಣವಾನಂದ ಸ್ವಾಮಿ ವೃಥಾ ಈ ಕಸುಬಿನ ಬಗ್ಗೆ ವಿಷಯವನ್ನು ಎತ್ತಿಕೊಂಡು ಬಿಲ್ಲವ ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಮೂರ್ತೆದಾರಿಕೆ ಕಸುಬು ನಡೆಸುತ್ತಾ ಬಂದವರಿಗೆ ಶಿಕ್ಷಣ ನೀಡಿ ಪರ್ಯಾಯ ಉದ್ಯೋಗಾವಕಾಶ ಕಲ್ಪಿಸ ಬೇಕಾಗಿದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka