ಪಾಲಾರ್ ಚಿತ್ರಕ್ಕೆ U/A ಸರ್ಟಿಫಿಕೇಟ್: CBFC ಸದಸ್ಯರಿಂದ ಚಿತ್ರಕ್ಕೆ ಮೆಚ್ಚುಗೆ

ಪಾಲಾರ್ ಚಿತ್ರಕ್ಕೆ ಸೆನ್ಸಾರ್ ನಲ್ಲಿ U/A ಸರ್ಟಿಫಿಕೇಟ್ ಬಂದಿದ್ದು, CBFC ಸದಸ್ಯರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ನೇರವಾಗಿ ವಿಷಯ ಮಾತನಾಡಿರುವ ಇಂತಹ ಸಿನೆಮಾ ನಾವು ನೋಡಿಲ್ಲ ಎಂದು ಪ್ರಶಂಸಿಸಿದ್ದಾರೆ.
CBFC ಸದಸ್ಯರ ಮೆಚ್ಚುಗೆಯ ಮಾತುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆಯಬೇಕೋ ಬೇಡವೋ ಅನ್ನೋದು ಗೊತ್ತಿಲ್ಲ. ಆದರೆ, ಅವರಿಗೆ ಆಗಿರುವ ಅನುಭವ ನಿಮಗೂ ಆಗಬೇಕಾದ್ರೆ, ಈ ಚಿತ್ರವನ್ನು ವೀಕ್ಷಿಸಿ ಎಂದು ಚಿತ್ರದ ನಿರ್ದೇಶಕ ಜೀವಾ ನವೀನ್ ಹೇಳಿದ್ದಾರೆ.
ಚಿತ್ರದಲ್ಲಿ ಹಳ್ಳಿ ಆಡು ಭಾಷೆಯ ಕೆಲವು ಪದಗಳಿಗೆ ಕತ್ತರಿ ಹಾಕಲಾಗಿದೆ. ಒಂದು ದೃಶ್ಯದಲ್ಲಿ 11 ಸೆಕೆಂಡ್ಸ್ ಕತ್ತರಿ ಹಾಕಲು ಸೆನ್ಸಾರ್ ಆದೇಶ ನೀಡಿದೆ ಎಂದು ಜೀವಾ ತಿಳಿಸಿದ್ದಾರೆ.
ಪಾಲಾರ್ ಚಿತ್ರದ ಯಶಸ್ವಿಗೆ ವಿವಿಧ ಊರುಗಳಲ್ಲಿ ಸಾರ್ವಜನಿಕರು ಬ್ಯಾನರ್ ಹಾಕುವ ಮೂಲಕ ಬೆಂಬಲಿಸುತ್ತಿದ್ದಾರೆ. ಕಡೂರು ಬಳಿಯ ಪಂಚನಳ್ಳಿಯ ಸಂಚಾರಿ ವಿಜಯ್ ವೃತ್ತದಲ್ಲಿ ಪಂಚನಳ್ಳಿ ಗ್ರಾಮಸ್ಥರು ಬ್ಯಾನರ್ ಹಾಕಿದ್ದಾರೆ. ಇದೇ ರೀತಿಯಲ್ಲಿ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕರು ಬ್ಯಾನರ್ ಹಾಕಿ ಚಿತ್ರಕ್ಕೆ ಪ್ರಚಾರ ನೀಡುತ್ತಿರುವುದು ಕಂಡು ಬಂದಿದೆ ಎಂದು ನವೀನ್ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw