ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಅವ್ಯವಸ್ಥೆ: ಕನ್ನಡಾಭಿಮಾನಿಗಳಿಂದ ಪ್ರತಿಭಟನೆ
ಹಾವೇರಿಯಲ್ಲಿ ನಡೆದ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅವ್ಯವಸ್ಥೆಯನ್ನು ಖಂಡಿಸಿ ಚಿಕ್ಕಮಗಳೂರಿನ ಕನ್ನಡಾಭಿಮಾನಿಗಳು ಸೇರಿದಂತೆ ಇತರ ಜಿಲ್ಲೆಯಿಂದ ಆಗಮಿಸಿದ ಕನ್ನಡಾಭಿಮಾನಿಗಳು ಪ್ರತಿಭಟನೆ ನಡೆಸಿದರು.
ದೂರದೂರಿನಿಂದ ಬಂದವರ ವಸತಿ ಮತ್ತಿತ್ತರ ಸೌಕರ್ಯಗಳ ಬಗ್ಗೆ ವಿಚಾರಿಸಲು ವಿಚಾರಣೆ ಕೌಂಟರ್ ಗೆ ಹೋದರೆ ಕೌಂಟರ್ ನಲ್ಲಿ ಕೇಳುವವರೇ ಇಲ್ಲ. ಆನ್ ಲೈನ್ ನಲ್ಲಿ ನೋಂದಣಿ ಮಾಡಿದವರು ನೋಂದಣಿಯ ಬಗ್ಗೆ ವಿಚಾರಿಸಿದರೇ ನೋಂದಣಿ ಕೌಂಟರಿನಲ್ಲಿ ನೋಂದಣಿ ಮಾಡಿಕೊಂಡ ವಿವರಗಳು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಸತಿ ಸೌಕರ್ಯ ಕಲ್ಪಿಸಿರುವವಲ್ಲಿನ ಅಧಿಕಾರಿಗಳಿಗೆ ಕರೆ ಮಾಡಿದರೇ ಸಂಪರ್ಕಕ್ಕೆ ಸಿಗುತ್ತಿಲ್ಲ. ಹಣ ಕಟ್ಟಿದರೂ ಕೂಡ ನೋಂದಣಿ ಕೌಂಟರ್ ನಲ್ಲಿ ಬ್ಯಾಗ್ ಮತ್ತು ಇತರ ಸೌಲಭ್ಯ ಇಲ್ಲ ಎನ್ನುತ್ತಿದ್ದಾರೆ ಎಂದು ಸಮ್ಮೇಳನದ ನೋಂದಣಿ ಕೌಂಟರ್ ನ ಮುಂದೆ ದಿಡೀರ್ ಪ್ರತಿಭಟನೆ ನಡೆಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw