ತಣ್ಣಗಿನ ಚಪಾತಿ ನೀಡಿದ್ದಕ್ಕೆ ಡಾಬಾ ಮಾಲಿಕನಿಗೆ ಗುಂಡೇಟು
ಉತ್ತರಪ್ರದೇಶ: ಕ್ರಿಮಿನಲ್ ಗಳ ಸ್ವರ್ಗ ಉತ್ತರ ಪ್ರದೇಶದಲ್ಲಿ ಇಂತಹ ಕ್ಷುಲ್ಲಕ ವಿಚಾರಗಳಿಗೂ ಹಲ್ಲೆ, ಹತ್ಯೆ, ಅತ್ಯಾಚಾರ, ಸಜೀವ ಸುಟ್ಟು ಹಾಕುವುದು ಮೊದಲಾದ ಹೇಯ ಕೃತ್ಯ ನಡೆಯುತ್ತಲೇ ಇರುತ್ತದೆ. ಇದು ಈ ರಾಜ್ಯದಲ್ಲಿ ಸರ್ವೇ ಸಾಮಾನ್ಯ. ಮಾಧ್ಯಮಗಳು ಉತ್ತರಪ್ರದೇಶ ಸಿಎಂಗೆ ಕೊಡುತ್ತಿರುವ ಬಿಟ್ಟಿ ಬಿಲ್ಡಪ್ ನೋಡಿದರೆ ಅದೇನೋ ಭೂಮಿಯ ಮೇಲಿನ ಸ್ವರ್ಗ ಎಂದೇ ಅಂದುಕೊಳ್ಳಬೇಕು. ಆದರೆ, ಇಲ್ಲಿ ಮನುಷ್ಯತ್ವಕ್ಕೆ ಬೆಲೆಯೇ ಇಲ್ಲ. ಇದೀಗ ಇಂತಹ ಘಟನೆಗಳಲ್ಲಿ ಇದೀಗ ಇನ್ನೊಂದು ಅಮಾನವೀಯ ಘಟನೆ ಸದ್ಯ ವರದಿಯಾಗಿದೆ.
ತಣ್ಣಗಿನ ಚಪಾತಿ ನೀಡಿದ್ದಾರೆ ಎಂದು ಆರೋಪಿಸಿ ಇಬ್ಬರು ಯುವಕರು ಡಾಬಾದ ಮಾಲಿಕನ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಇಲ್ಲಿನ ಏಟಾ ಬಸ್ ನಿಲ್ದಾಣದ ಬಳಿ ನಡೆದಿದೆ. ಇಬ್ಬರು ಯುವಕರು, ಡಾಬಾದಲ್ಲಿ ತಮಗೆ ತಣ್ಣಗಿನ ಚಪಾತಿ ನೀಡಲಾಗಿದೆ ಎಂದು ಮಾಲಿಕನಿಗೆ ಅವಾಚ್ಯ ಶಬ್ದಗಳಲ್ಲಿ ಬೈದು ದಾಂಧಲೆ ನಡೆಸಿದ್ದಾರೆ. ಈ ಇಬ್ಬರು ಯುವಕರ ಪೈಕಿ ಓರ್ವ ಪಿಸ್ತೂಲ್ ತೆಗೆದು ಮಾಲಿಕನ ಮೇಲೆ ಗುಂಡು ಹಾರಿಸಿದ್ದಾನೆ.
ಮಾಲಿಕ ಅವದೇಶ್ ಯಾದವ್ ತೊಡೆಗೆ ಗುಂಡು ತಗುಲಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಗುಂಡು ತೆಗೆಯಲಾಗಿದೆ. ಘಟನೆಯ ಸಂಬಂಧ ತಕ್ಷಣವೇ ಅಮಿತ್ ಚೌಹಾನ್ ಹಾಗೂ ಕೌಸ್ತುಭ್ ಮಿಶ್ರಾ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಎಫ್ ಐಆರ್ ದಾಖಲಿಸಿದ್ದಾರೆ.