ಅಂಜು ಶ್ರೀ ಪಾರ್ವತಿ ಸಾವು ಪ್ರಕರಣ: ತನಿಖೆಗೆ ಆದೇಶಿಸಿದ ಕೇರಳ‌ ಆರೋಗ್ಯ ಸಚಿವೆ ವೀಣಾ ಜಾರ್ಜ್ - Mahanayaka

ಅಂಜು ಶ್ರೀ ಪಾರ್ವತಿ ಸಾವು ಪ್ರಕರಣ: ತನಿಖೆಗೆ ಆದೇಶಿಸಿದ ಕೇರಳ‌ ಆರೋಗ್ಯ ಸಚಿವೆ ವೀಣಾ ಜಾರ್ಜ್

amshu shri
08/01/2023

ಕಲುಷಿತ ಆಹಾರ ಸೇವನೆಯಿಂದ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆ  ಕಾಸರಗೋಡಿನಲ್ಲಿ‌ ನಡೆದಿದೆ. ಈ ಸಾವಿನ ತನಿಖೆಯನ್ನು ನಡೆಸಲು ಕೇರಳ‌ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆಹಾರ ಸುರಕ್ಷತಾ ಆಯುಕ್ತರಿಗೆ ಆದೇಶಿಸಿದ್ದು ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.

ಕಾಸರಗೋಡಿನ ಪೆರಿಂಬಳ ನಿವಾಸಿ 20 ವರ್ಷದ ಅಂಜು ಶ್ರೀ ಪಾರ್ವತಿ ಸಾವನ್ನಪ್ಪಿದ ದುರ್ದೈವಿ ವಿದ್ಯಾರ್ಥಿನಿ. ಅಂಜುಶ್ರೀ ಕಾಸರಗೋಡಿನ ಕುಝಿಮಂದಿ ಅನ್ನೋ ಹೋಟೇಲ್ ನಿಂದ ಆನ್ ಲೈನ್ ಮೂಲಕ ಬಿರಿಯಾನಿ‌ ಆರ್ಡರ್ ಮಾಡಿ ತರಿಸಿ ತಿಂದಿದ್ದರು. ಕೆಲ ಗಂಟೆಗಳ ಬಳಿಕ‌ ಆಕೆ ಅಸ್ವಸ್ಥಳಾದ ಹಿನ್ನಲೆಯಲ್ಲಿ ಕಾಸರಗೋಡಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ‌ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಅಂಜುಶ್ರೀ ಸಾವನ್ನಪ್ಪಿದ್ದು,ಆಕೆಯ ಪೋಷಕರು ಹೋಟೇಲ್ ನ ಬಿರಿಯಾನಿ ತಿಂದು ಅಂಜುಶ್ರೀ ಸಾವನ್ನಪ್ಪಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿ ಪೊಲೀಸ್ ದೂರು ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ